ಕೊಡಮಣಿತ್ತಾಯ ಮೂಲ ದೈವಸ್ಥಾನ ಆಟಿ ಕೋಲ

Bel_Kodamanithaya
Published on

ಬೆಳ್ತಂಗಡಿ: ತಾಲೂಕಿನ ಪೆರಿಂಜೆ ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಸಿಂಹ ಸಂಕ್ರಮಣ ಹಾಗೂ ಆಟಿ ಕೋಲ ಕ್ಷೇತ್ರದ ಆನುವಂಶೀಯ ಆಡಳಿತದಾರ ಎ.ಜೀವಂಧರ ಕುಮಾರ್ ಉಪಸ್ಥಿತಿಯಲ್ಲಿ ರಾಮದಾಸ ಆಸ್ರಣ್ಣರ ಪೌರೋಹಿತ್ಯದಲ್ಲಿ ನಡೆಯಿತು.

ಸಂಕ್ರಮಣ ಪ್ರಯುಕ್ತ ಬೆಳಗ್ಗೆ ಶ್ರೀ ದೈವಕ್ಕೆ ಹೂವಿನ ಪೂಜೆ ಸೇವೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಆಟಿ ತಿಂಗಳ ಪ್ರಯುಕ್ತ ಸಂಜೆ ಕ್ಷೇತ್ರದಲ್ಲಿ ಶ್ರೀ ದೈವಕ್ಕೆ ಆಟಿಕೋಲ ಮತ್ತು ತುಲಾಭಾರ ಸೇವೆ ನಡೆಯಿತು. ಶ್ರೀಕ್ಷೇತ್ರದ ವಿಕಾಸ್ ಜೈನ್ ಹಾಗೂ ವಿಶ್ವಾಸ್ ಜೈನ್ ಸ್ವಾಗತಿಸಿದರು.

ಸಾಂಪ್ರದಾಯಿಕವಾಗಿ ನಡೆದ ಆಟಿ ಕೋಲದಲ್ಲಿ ಮಾಗಣೆ, ಗುತ್ತು ಬರ್ಕೆಯವರು, ಗುರಿಕಾರರು ಹಾಗೂ ಭಕ್ತರು ಪಾಲ್ಗೊಂಡು ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net