ಹಾಡಿಗಳಲ್ಲಿ ಬೆಳಕು ಮೂಡುವುದು ಯಾವಾಗ ?

ಹಾಡಿಗಳಲ್ಲಿ ಬೆಳಕು ಮೂಡುವುದು ಯಾವಾಗ ?
ಕೊಡಗಿನ ಗಿರಿಜನ ಹಾಡಿಯೊಂದರ ವಿದ್ಯುತ್ ಸಂಪರ್ಕ ವಂಚಿತ ಮನೆ
Published on: 

ಮಡಿಕೇರಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳ ಸಬಲೀಕರಣಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ, ಜಿಲ್ಲೆಯ ಬಹುತೇಕ ಆದಿವಾಸಿ ಹಾಡಿಗಳು ಇಂದಿಗೂ ವಿದ್ಯುತ್ ಸಂಪರ್ಕದಿAದ ವಂಚಿತವಾಗಿವೆ. ಸ್ವಾತಂತ್ರ‍್ಯ ಸಿಕ್ಕು ದಶಕಗಳು ಕಳೆದರೂ ಕಾಡಂಚಿನ ಹಾಗೂ ಅರಣ್ಯದೊಳಗಿನ ಆದಿವಾಸಿ ಕುಟುಂಬಗಳು ಕತ್ತಲಲ್ಲೇ ದಿನ ದೂಡುವಂತಾಗಿದೆ. ಸರ್ಕಾರಗಳು ಪ್ರತಿಯೊಂದು ಮನೆಗೂ ವಿದ್ಯುತ್ ತಲುಪಿಸಲು ಹಲವು ಉಚಿತ ಹಾಗೂ ಅನುದಾನಿತ ಯೋಜನೆಗಳನ್ನು ರೂಪಿಸಿವೆ. ಆದರೆ, ಯೋಜನೆಯ ಅನುಷ್ಠಾನಕ್ಕೆ ಬರಬೇಕಾದ ವಿವಿಧ ಇಲಾಖೆಗಳ ನಡುವೆ ಸಮರ್ಪಕ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ.

ಅರಣ್ಯ ಇಲಾಖೆ, ಸೆಸ್ಕ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ನಡುವೆ ಸರಿಯಾದ ಸಮನ್ವಯ ಇಲ್ಲದಿರುವುದೇ ಈ ಸಮಸ್ಯೆಗೆ ಮುಖ್ಯ ಕಾರಣ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಹಾಡಿಗಳಿಗೆ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಅಳವಡಿಸಲು ಅರಣ್ಯ ಇಲಾಖೆಯ ನಿಯಮಗಳು ಮತ್ತು ಅನುಮತಿಗಳ ತೊಡಕು ಎದುರಾಗುತ್ತಿದೆ ಎನ್ನಲಾಗುತ್ತಿದೆ. ವಿದ್ಯುತ್ ಸರಬರಾಜು ಮಂಡಳಿಗಳು ಕಾಮಗಾರಿಗೆ ಸಿದ್ಧರಿದ್ದರೂ ಅರಣ್ಯ ಇಲಾಖೆಯಿಂದ ಶೀಘ್ರ ನಿರಾಕ್ಷೇಪಣಾ ಪತ್ರ ಸಿಗದೆ ಯೋಜನೆಗಳು ಕಡತಗಳಲ್ಲೇ ಧೂಳು ಹಿಡಿಯುತ್ತಿವೆ.

ವಿದ್ಯುತ್ ಇಲ್ಲದೆ ಆದಿವಾಸಿಗಳ ದೈನಂದಿನ ಜೀವನ ದುಸ್ತರವಾಗಿದೆ ರಾತ್ರಿ ವೇಳೆ ವಿದ್ಯುತ್ ದೀಪಗಳಿಲ್ಲದೆ ಆನೆ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ದಾಳಿ ಭೀತಿಯಲ್ಲಿ ಹಾಡಿ ಜನರು ಭಯದಲ್ಲೇ ರಾತ್ರಿ ಕಳೆಯುವಂತಾಗಿದೆ. ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೆ ಆದಿವಾಸಿ ಮಕ್ಕಳ ಓದು-ಬರಹ ಹಾಗೂ ಶೈಕ್ಷಣಿಕ ಪ್ರಗತಿಗೆ ತೀವ್ರ ಅಡಚಣೆ ಉಂಟಾಗಿದೆ

ಸÀರ್ಕಾರ ಆದಿವಾಸಿ ಹಾಡಿಗಳ ಅಭ್ಯುದಯಕ್ಕಾಗಿ ಸಾಕಷ್ಟು ಅನುದಾನಗಳನ್ನು ಕೊಡುತ್ತಿದೆ. ಆದರೆ ನೈಜವಾದ ಮೂಲ ದಾಖಲಾತಿಗಳ ಕೊರತೆಯಿಂದಾಗಿ ಆದಿವಾಸಿಗಳು ಇವುಗಳಿಂದ ವಂಚಿತರಾಗುತ್ತಿದ್ದಾರೆ. ಯಾವುದೇ ಹಾಡಿಗಳಿಗೆ ಹೋದರೂ ಕನಿಷ್ಠ 3ರಿಂದ 5 ಗುಡಿಸಲುಗಳಿಗೆ ಪ್ಲಾಸ್ಟಿಕ್ ಹೊದಿಕೆ ಹಾಸಿರುವ ಮನೆಗಳನ್ನು ಇಂದಿಗೂ ಕಾಣಬಹುದು. ಇಂಥ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ದೂರದ ಮಾತೇ ಸರಿ. ಆದರೆ ಅಧಿಕಾರಿಗಳ ಕಣ್ಣಿಗೆ ಇವೆಲ್ಲಾ ಬೀಳದಿರುವುದು ವಿಪರ್ಯಸದ ಸಂಗತಿ.

ಆರ್.ಆರ್. ಮೋಹನ್, ಮಾಜಿ ಅಧ್ಯಕ್ಷ, ಗ್ರಾ.ಪಂ., ಕಂಬಿಬಾಣೆ

ವಿದ್ಯುತ್ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ಸಂಬAಧಪಟ್ಟ ಇಲಾಖೆಗಳ ನಡುವಿನ ಸಮನ್ವಯದ ಕೊರತೆ, ಆಡಳಿತಾತ್ಮಕ ವಿಳಂಬ ಹಾಗೂ ಅಗತ್ಯ ಕ್ರಮಗಳ ಅನುಷ್ಠಾನದಲ್ಲಿನ ಸಮಸ್ಯೆಗಳು ಪ್ರಮುಖ ಅಡಚಣೆಗಳಾಗಿವೆ. ವಿದ್ಯುತ್ ಸೌಲಭ್ಯ ಕೇವಲ ಬೆಳಕಿಗೆ ಸೀಮಿತವಾಗಿಲ್ಲ. ಮಕ್ಕಳ ಶಿಕ್ಷಣ, ಕುಡಿಯುವ ನೀರಿನ ವ್ಯವಸ್ಥೆ, ಸುರಕ್ಷತೆ, ಆರೋಗ್ಯ ಹಾಗೂ ಒಟ್ಟಾರೆ ಜೀವನಮಟ್ಟ ಸುಧಾರಣೆಗೆ ಇದು ಅತ್ಯಗತ್ಯವಾಗಿದೆ. ಹಾಗಾಗಿ ಕೊಡಗು ಜಿಲ್ಲಾಡಳಿತ, ಸೆಸ್ಕ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ ಹಾಗೂ ಸಂಬAಧಪಟ್ಟ ಇತರ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ವಿದ್ಯುತ್ ಸಂಪರ್ಕವಿಲ್ಲದ ಎಲ್ಲಾ ಆದಿವಾಸಿ ಹಾಡಿಗಳನ್ನು ಗುರುತಿಸಿ, ಸ್ಥಳ ಪರಿಶೀಲನೆ ನಡೆಸಿ, ತಾಂತ್ರಿಕ ಹಾಗೂ ಕಾನೂನುಬದ್ಧ ಅಡೆತಡೆಗಳನ್ನು ಪರಿಹರಿಸಿ, ಅರ್ಹ ಕುಟುಂಬಗಳಿಗೆ ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು.

ಸುರೇಶ್ ಮೊಗೇರ, ಒಡೆಯನಪುರ ಗ್ರಾಮಸ್ಥ

ಕೊಡಗಿನಲ್ಲಿ ಹಾಡಿಗಳಿಗೆ ವಿದ್ಯುತ್ ಬೆಳಕು ಕೊಡಲು ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಿಲ್ಲೆಗೆ ಒದಗಿಸಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಸಂಬAಧಿಸಿದ ಇಲಾಖೆಗಳಿಂದ ಪೂರಕ ಸ್ಪಂದನೆ ಸಿಗುತ್ತಿಲ್ಲ. ಕಂಬ ಇಲ್ಲ, ವೈರ್ ಇಲ್ಲ, ಮೀಟರ್ ಇಲ್ಲ ಎನ್ನುವ ಉತ್ತರ ಬರುತ್ತದೆ. ಹಾಗಾಗಿ ಜಿಲ್ಲೆಯಲ್ಲಿ ಬಹುತೇಕ ಹಾಡಿಗಳು ಕತ್ತಲೆಯಲ್ಲಿವೆ. ಸಂಬAಧಿಸಿದವರು ಕೂಡಲೇ ಹಾಡಿಗಳಿಗೆ ಬೆಳಕು ನೀಡುವ ಕೆಲಸ ಮಾಡಬೇಕು.

ಆರ್.ಕೆ. ಚಂದ್ರು, ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸದಸ್ಯ

ದೂರದ ಮತ್ತು ಅರಣ್ಯದಂಚಿನ ಗ್ರಾಮಗಳಿಗೆ ವಿಶ್ವಾರ್ಹ ವಿದ್ಯುತ್ ಪೂರೈಕೆಗೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದೀರ್ಘ ವಿದ್ಯುತ್ ಮಾರ್ಗಗಳಿಂದ ಉಂಟಾಗುವ ವಿದ್ಯುತ್ ನಷ್ಟ ತಪ್ಪಿಸಲೂ ಕೆಲಸಗಳು ನಡೆದಿವೆ. ಇದರೊಂದಿಗೆ ಕಡಿಮೆ ವೋಲ್ಟೇಜ್ ಮತ್ತು ಪದೇ ಪದೇ ಉಂಟಾಗುತ್ತಿದ್ದ ವಿದ್ಯುತ್ ವ್ಯತ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಗೃಹ ಮಾತ್ರವಲ್ಲ ಕೃಷಿ, ಸಣ್ಣ ಕೈಗಾರಿಕೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಿ ಬುಡಕಟ್ಟು ಸಮುದಾಯದವರು ಸುಂದರ ಬದಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಯೋಜಬನೆಳ ಸಮರ್ಪಕ ಅನುಷ್ಠಾನ ಮಾಡಲಾಗುವುದು.

ಎಸ್.ಎಸ್. ಸತೀಶ್, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್, ಸೆಸ್ಕ್, ಗೋಣಿಕೊಪ್ಪಲು ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net