

ನಾಪೋಕ್ಲು: ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ಕದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿ ಸೂಕ್ತ ಸ್ಥಳವನ್ನು ಗುರುವಾರ ಗುರುತಿಸಲಾಯಿತು.
ನಾಲ್ಕು ಸ್ವಸಹಾಯ ಸಂಘ, ಗಜಾನನ ಭಕ್ತ ಮಂಡಳಿ ಹಾಗೂ ಸಾರ್ವಜನಿಕರು ಸಲ್ಲಿಸಿದ ಮನವಿಯ ಮೇರೆಗೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಸಮುದಾಯ ಭವನ ಮಂಜೂರು ಮಾಡಿದ್ದರು. ಅದರಂತೆ ಗುತ್ತಿಗೆದಾರ ಗೌರೀಶ್, ಭಾಗಮಂಡಲ ಕಾಂಗ್ರೆಸ್ ವಲಯ ಅಧ್ಯಕ್ಷ ವೆಂಕಟೇಶ್ ಅವರು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಸ್ಥಳ ಆಯ್ಕೆ ಮಾಡಿದರು.
ಬೆಟ್ಟಗೇರಿ ಗ್ರಾಮ ಪಂಚಾಯಿತಿ ವಲಯ ಕಾಂಗ್ರೆಸ್ ಅಧ್ಯಕ್ಷ ಕೊಡಗನ ತೀರ್ಥಕುಮಾರ್, ಭಾಗಮಂಡಲ ಕಾಂಗ್ರೆಸ್ ವಲಯಾಧ್ಯಕ್ಷ ವೆಂಕಟೇಶ್ ಸಲಹೆ ನೀಡಿದರು.
ಶ್ರೀಕೃಷ್ಣ ಸಂಘದ ಕಾರ್ಯದರ್ಶಿ ಹೊಸೋಕ್ಲು ಮೊಣ್ಣಪ್ಪ, ಸ್ಥಳೀಯರಾದ ಪ್ರಕಾಶ್ ರೈ , ನೆಯ್ಯಂಣಿ ತಾರೇಂದ್ರ, ರಂಜನ್, ಲೋಕನಾಥ್, ಬೈತಡ್ಕ ಎಸ್.ದೇವಯ್ಯ, ವೀಕ್ಷಿತ್, ಜೀವನ್, ಲವ ಮತ್ತಿತರರು ಉಪಸ್ಥಿತರಿದ್ದರು.