ಸುಂಟಿಕೊಪ್ಪ: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್‌ಬೈಲ್ ಫ್ರೆಂಡ್ಸ್ ಯೂತ್ ವತಿಯಿಂದ ಕಾನ್‌ಬೈಲ್ ಪ್ರಾಥಮಿಕ ಶಾಲೆಯಲ್ಲಿ ಗಿಡಗಂಟಿ ಕಡಿದು ಸ್ವಚ್ಛಗೊಳಿಸಿದರು.
ಕಾನ್‌ಬೈಲ್ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಶಂಕರನಾರಾಯಣ, ಉಪಾಧ್ಯಕ್ಷ ಧರ್ಮು ಸೇರಿದಂತೆ ಪದಾಧಿಕಾರಿಗಳು ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು.
ಗೌರವಾಧ್ಯಕ್ಷ ವಸಂತ, ಮಾಜಿ ಅಧ್ಯಕ್ಷ ಪೌಲೋಸ್, ಕಾರ್ಯದರ್ಶಿ ಪ್ರಶಾಂತ್, ಕ್ರೀಡಾ ಕಾರ್ಯದರ್ಶಿ ಚಂದ್ರು, ಸದಸ್ಯರಾದ ಅನಿಲ್‌ಕುಮಾರ್, ದಿನೇಶ್, ದಯಾನಂದ ರೈ, ದಿವಾಕರ ಇತರರು ಇದ್ದರು.