ಕಾಡಾನೆ ಸಂಚಾರ, ಸ್ಥಳೀಯರಲ್ಲಿ ಆತಂಕ

ಸಿದ್ದಾಪುರ ಮೈಸೂರು ಮುಖ್ಯರಸ್ತೆಯ ಮಾಲ್ದಾರೆ ಸಮೀಪ ಶನಿವಾರ ಬೆಳಗ್ಗೆ ಕಾಡಾನೆಯೊಂದು ರಸ್ತೆ ದಾಟಿರುವುದು.
ಸಿದ್ದಾಪುರ ಮೈಸೂರು ಮುಖ್ಯರಸ್ತೆಯ ಮಾಲ್ದಾರೆ ಸಮೀಪ ಶನಿವಾರ ಬೆಳಗ್ಗೆ ಕಾಡಾನೆಯೊಂದು ರಸ್ತೆ ದಾಟಿರುವುದು.
Published on
ಸಿದ್ದಾಪುರ: ಸಿದ್ದಾಪುರ ಮೈಸೂರು ಮುಖ್ಯ ರಸ್ತೆಯ ಮಾಲ್ದಾರೆ ಸಮೀಪ ಶನಿವಾರ ಬೆಳಗ್ಗೆ ಕಾಡಾನೆಯೊಂದು ರಸ್ತೆ ದಾಟಿದ್ದು, ಸ್ಥಳೀಯರು ಹಾಗೂ ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ.
ಮಾಲ್ದಾರೆ ಭಾಗದ ಕಾಫಿ ತೋಟದ ಸೋಲಾರ್ ಬೇಲಿ ಮುರಿದು ಬಂದ ಕಾಡಾನೆ ಅರಣ್ಯ ಪ್ರದೇಶದ ಕಡೆಗೆ ರಸ್ತೆ ದಾಟುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಇದೇ ವೇಳೆ ಕಾಡಾನೆ ತೋಟದಲ್ಲಿದ್ದ ಸಿಲ್ವರ್ ಮರವನ್ನು ಮುರಿದು ವಿದ್ಯುತ್ ಕಂಬದ ಮೇಲೆ ತಳ್ಳಿ ಹಾಕಿರುವುದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net