ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ

ಪೊನ್ನಂಪೇಟೆ ಸಮೀಪದ ಕೋತೂರು ಗ್ರಾಮದಲ್ಲಿ ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆ ಆಯೋಜಿಸಲಾಗಿತ್ತು. ಅಧ್ಯಕ್ಷ ಕೆ.ಆರ್.ಸುರೇಶ್, ವಿ.ವೈ ಗಣೇಶ್, ಬಸವರಾಜು, ಸತೀಶ್, ಗೌರಮ್ಮ, ಸರಸ್ವತಿ ಹಾಗೂ ಇತರರಿದ್ದರು.
ಪೊನ್ನಂಪೇಟೆ ಸಮೀಪದ ಕೋತೂರು ಗ್ರಾಮದಲ್ಲಿ ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆ ಆಯೋಜಿಸಲಾಗಿತ್ತು. ಅಧ್ಯಕ್ಷ ಕೆ.ಆರ್.ಸುರೇಶ್, ವಿ.ವೈ ಗಣೇಶ್, ಬಸವರಾಜು, ಸತೀಶ್, ಗೌರಮ್ಮ, ಸರಸ್ವತಿ ಹಾಗೂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಆರ್. ಸುರೇಶ್ ಹೇಳಿಕೆ
  • ವಾರ್ಷಿಕ ಮಹಾಸಭೆ
ಪೊನ್ನಂಪೇಟೆ: ಕೃಷಿ ಕಾಯಕವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಒಕ್ಕಲಿಗ ಸಮುದಾಯ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಒಗ್ಗಟ್ಟಿನ ಅಗತ್ಯವಿದೆ. ಇದರಿಂದ ಸಾಮಾಜಿಕ ಬಾಂಧವ್ಯವನ್ನು ಬಲಪಡಿಸಲು ಮತ್ತು ಸಮುದಾಯವನ್ನು ಒಟ್ಟಾಗಿ ನಿಲ್ಲುವಂತೆ ಮಾಡಲು ಸಾಧ್ಯವಿದೆ ಎಂದು ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಆರ್. ಸುರೇಶ್ ಹೇಳಿದರು.
ಪೊನ್ನಂಪೇಟೆ ಸಮೀಪದ ಕೋತೂರು ಗ್ರಾಮದ ಮಲೆ ಮಹದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮುದಾಯ ಬಾಂಧವರ ಒಗ್ಗಟ್ಟು ವಿಶೇಷವಾಗಿ ದುರ್ಬಲರಿಗೆ ಸಹಾಯ ಮಾಡಲು, ಆರ್ಥಿಕ ಹೊರೆಗಳನ್ನು ಕಡಿಮೆ ಮಾಡಲು ಮತ್ತು ಸಮುದಾಯದ ಅಭಿವೃದ್ಧಿಗೆ ಸಹಭಾಗಿತ್ವದ ಚಟುವಟಿಕೆಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಹೆಚ್ಚು ನೆರವಾಗುತ್ತದೆ ಎಂದರು.
ಈಗಾಗಲೇ ಸಂಘದ ವತಿಯಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕಾಗಿ ಕೋತೂರಿನಲ್ಲಿ ನಿವೇಶನವನ್ನು ಖರೀದಿಸಲಾಗಿದೆ. ಈ ಸ್ಥಳದಲ್ಲಿ ಉದ್ದೇಶಿತ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ಮತ್ತು ಸಮುದಾಯ ಭವನ ನಿರ್ಮಾಣ ಯೋಜನೆ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ಮತ್ತು ದಾನಿಗಳಿಂದ ಪಡೆಯುವ ಪ್ರಕ್ರಿಯೆಗಳನ್ನು ಮುಂದಿನ ತಿಂಗಳಿನಿಂದ ಆರಂಭಿಸಲಾಗುವುದು ಎಂದು ಕೆ. ಆರ್. ಸುರೇಶ್ ಮಾಹಿತಿ ನೀಡಿದರು.
ಇದಕ್ಕೂ ಮೊದಲು ಮಹಾಸಭೆಯನ್ನು ಸಂಘದ ಹಿರಿಯ ಸದಸ್ಯರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು. ಸಂಘದ ಗೌರವ ಕಾರ್ಯದರ್ಶಿ ವಿ.ವೈ.ಗಣೇಶ್ ಆಡಳಿತ ಮಂಡಳಿ ವರದಿಯನ್ನು ಮಹಾಸಭೆಗೆ ಮಂಡಿಸಿದರು. ಸಂಘದ ನಿರ್ದೇಶಕರಾದ ವಿ. ಎಸ್. ಬಸವರಾಜು, ವಿ.ವಿ.ಉಲ್ಲಾಸ್, ಕೆ.ಕೆ.ಮಂಜುನಾಥ್, ವಿ.ಆರ್.ಸತೀಶ್, ವಿ.ಟಿ.ತಮ್ಮಯ್ಯ, ವಿ.ಆರ್.ಗೌರಮ್ಮ, ವಿ.ಆರ್.ಸರಸ್ವತಿ ಮೊದಲಾದವರು ವೇದಿಕೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net