ಆರ್‌ಎಸ್‌ಎಸ್ ಮುಖಂಡ ನರೇಂದ್ರಗೆ ಶ್ರದ್ಧಾಂಜಲಿ ಸಲ್ಲಿಕೆ

ನಾಪೋಕ್ಲು ತಾಲೂಕಿನ ಶ್ರೀರಾಮ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅಗಲಿದ ಎಂ.ಎಂ.ನರೇಂದ್ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಶ್ಯಾಮಲಾ, ಉದಯ ಶಂಕರ್, ದಿನೇಶ್, ಕಂಗಂಡ ಜಾಲಿ ಪೂವಪ್ಪ, ಪ್ರತೀಪ ಬಿ ಎಂ, ಶಿವಚಾಳಿಯಂಡ ಜಗದೀಶ್, ಮೂವೇರ ಪಟ್ಟು ಪೆಮ್ಮಯ್ಯ, ಓಂಕಾರ್ ರವಿ ಇತರರು ಇದ್ದರು.

Published on
ನಾಪೋಕ್ಲು: ಸಮಾಜ ಸೇವಕ ಹಾಗೂ ಆರ್‌ಎಸ್‌ಎಸ್ ಮುಖಂಡ ಎಂ.ಎಂ.ನರೇಂದ್ರ ಅವರದ್ದು ಪ್ರೇರಣಶಕ್ತಿ. ಅವರ ಸಾಮಾಜಿಕ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದು ಹಿಂದೂಪರ ಸಂಘನೆಗಳ ಮುಖಂಡ ಶ್ಯಾಮ್‌ಪ್ರಸಾದ್ ಹೇಳಿದರು.
ಇಲ್ಲಿನ ಶ್ರೀರಾಮ ಮಂದಿರದಲ್ಲಿ ವಿಶ್ವ ಹಿಂದು ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಎಂ.ಎಂ.ನರೇಂದ್ರ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದರು.
ನರೇಂದ್ರ ಅವರು ಸಂಘ ಜೀವನದಲ್ಲಿ ಪ್ರೇರಕರಾಗಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದವರು. ದೇಶ, ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಆದರ್ಶ ಎಲ್ಲರಿಗೂ ಪ್ರೇರಣದಾಯಕ ಎಂದರು.
ಶ್ಯಾಮಲಾ, ಉದಯ ಶಂಕರ್, ದಿನೇಶ್, ಕಂಗಂಡ ಜಾಲಿ ಪೂವಪ್ಪ, ಪ್ರತೀಪ ಬಿ ಎಂ, ಶಿವಚಾಳಿಯಂಡ ಜಗದೀಶ್, ಮೂವೇರ ಪಟ್ಟು ಪೆಮ್ಮಯ್ಯ, ಓಂಕಾರ್ ರವಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net