ಆರೋಗ್ಯಕ್ಕಿಂತ ಬೇರೆ ಸಂಪತ್ತಿಲ್ಲ

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಮತ್ತು ಆರೋಗ್ಯ ಜಾಗೃತಿ ಶಿಬಿರವನ್ನು ಪ್ರೊ.ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಉದ್ಘಾಟಿಸಿದರು. ಎಂ.ಮೋಟಯ್ಯ, ಅಮೃತ್ ನಾಣಯ್ಯ ಇತರರಿದ್ದರು.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಮತ್ತು ಆರೋಗ್ಯ ಜಾಗೃತಿ ಶಿಬಿರವನ್ನು ಪ್ರೊ.ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಉದ್ಘಾಟಿಸಿದರು. ಎಂ.ಮೋಟಯ್ಯ, ಅಮೃತ್ ನಾಣಯ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರೊ.ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಅಭಿಪ್ರಾಯ
  • ಆರೋಗ್ಯ ತಪಾಸಣೆ ಶಿಬಿರ
ಗೋಣಿಕೊಪ್ಪ: ಪೊನ್ನಂಪೇಟೆ ಕೊಡವ ಸಮಾಜ, ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಗೋಣಿಕೊಪ್ಪ ಲೋಪಮುದ್ರ ಆಸ್ಪತ್ರೆ ಮತ್ತು ಕೊಡಗು ಹೆಲ್ತ್ ಫೌಂಡೇಶನ್ ಸಹಯೋಗದಲ್ಲಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಆರೋಗ್ಯ ಉಚಿತ ತಪಾಸಣೆ ಮತ್ತು ಆರೋಗ್ಯ ಜಾಗೃತಿ ಶಿಬಿರ ನಡೆಯಿತು. ಶಿಬಿರದಲ್ಲಿ ಸುಮಾರು 300ಕ್ಕೂ ಅಧಿಕ ಸಾರ್ವಜನಿಕರು ಆರೋಗ್ಯ ತಪಾಸಣೆಗೊಳಗಾದರು.
ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರೊ.ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಮಾತನಾಡಿ, ಉತ್ತಮ ಆರೋಗ್ಯ ಭಾಗ್ಯಕ್ಕಿಂತ ಬೇರೆ ಯಾವುದೇ ಸಂಪತ್ತು ಇಲ್ಲ. ಇಂದಿನ ಕಾಲದಲ್ಲಿ ಜನರಿಗೆ ವಿವಿಧ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಎಷ್ಟೋ ಜನರಿಗೆ ಸರಿಯಾದ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ದೊರೆಯದೇ ಇರಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಆರೋಗ್ಯ ಉಚಿತ ಶಿಬಿರ ನಡೆಸುವ ಇಂಗಿತ ವ್ಯಕ್ತಪಡಿಸಿದಾಗ ಲೋಪ ಮುದ್ರಾ ಆಸ್ಪತ್ರೆಯಿಂದ ಉತ್ತಮ ಸ್ಪಂದನೆ ದೊರೆಯಿತು ಎಂದರು.
ಸಮಾಜದ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ ಮಾತನಾಡಿ, ನಮ್ಮ ಸಮಾಜದಿಂದ ಪ್ರಥಮವಾಗಿ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಕಳೆದ ವರ್ಷ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಸಮಾಜ ಕೇವಲ ಕಲ್ಯಾಣ ಮಂಟಪಕ್ಕೆ ಸೀಮಿತವಾಗಬಾರದು ಎಂಬ ನಿಟ್ಟಿನಲ್ಲಿ ಸಾಧ್ಯವಾದಷ್ಟು ಜನರಿಗೆ ಪ್ರಯೋಜನವಾಗುವ ಸಾಮಾಜಿಕ ಕಾರ್ಯ ನಡೆಸಲಾಗುತ್ತಿದೆ ಎಂದರು.
ಕೊಡಗು ಹೆಲ್ತ್ ಫೌಂಡೇಶನ್ ಕಾರ್ಯದರ್ಶಿ ಮತ್ತು ಲೋಪಮುದ್ರ ಆಸ್ಪತ್ರೆಯ ಮುಖ್ಯ ತಜ್ಞ ವೈದ್ಯರಾದ ಡಾ.ಮುಕ್ಕಾಟಿರ ಅಮೃತ್ ನಾಣಯ್ಯ ಮಾತನಾಡಿ, ಆರೋಗ್ಯ ಶಿಬಿರಕ್ಕೆ ಯಾರು ಬಂದು ತಪಾಸಣೆ ಮಾಡಿಸಿಕೊಳ್ಳುವುದಿಲ್ಲ. ನಾನು ಆರೋಗ್ಯವಾಗಿಯೇ ಇದ್ದೇನೆ. ನಾನೇಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲಿ ಎಂದು ನಿರ್ಲಕ್ಷೃ ವಹಿಸುತ್ತಾರೆ. ಆರೋಗ್ಯ ಸಮಸ್ಯೆ ಉಲ್ಬಣವಾದಾಗ ಆಸ್ಪತ್ರೆಗೆ ಬರುತ್ತಾರೆ. ಆ ಸಂದರ್ಭದಲ್ಲಿ ಬಿಪಿ, ಶುಗರ್ ಇತ್ಯಾದಿ ಆರೋಗ್ಯ ಸಮಸ್ಯೆ ಇರುವುದು ಪತ್ತೆಯಾಗುತ್ತದೆ. ಆದ್ದರಿಂದ ನಿರಂತರವಾಗಿ ಆರೋಗ್ಯ ಜಾಗೃತಿಗಾಗಿ ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಎಲ್ಲವೂ ಸರಿಯಾಗಿದ್ದರೆ ಆರೋಗ್ಯವನ್ನು ಖಚಿತ ಪಡಿಸಿಕೊಳ್ಳಬಹುದು ಎಂದು ಹೇಳಿದರು.
ಆಸ್ಪತ್ರೆಯ ಕಣ್ಣಿನ ತಜ್ಞ ವೈದ್ಯ ಡಾ.ಡಾ.ಸೌಮ್ಯಾ ಗಣೇಶ್ ನಾಣಯ್ಯ, ಲೋಪಮುದ್ರ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಕಡೆಮಾಡ ತರುಣ್ ಜೋಯಪ್ಪ, ಚಕ್ಕೆರ ವಾಣಿ ಸಂಜು, ಪ್ರೊ.ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಕೊಡವ ಸಮಾಜ ನಿರ್ದೇಶಕ ಕೊಣಿಯಂಡ ಸಂಜು ಸೋಮಯ್ಯ, ಪೊಮ್ಮಕ್ಕಡ ಕೂಟದ ಗೌ.ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಕೊಡವ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ಗೌ.ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ , ಖಜಾಂಚಿ ಚೆಪ್ಪುಡೀರ ಕಾರ್ಯಪ್ಪ, ನಿರ್ದೇಶಕರಾದ ಕೊಣಿಯಂಡ ಸಂಜು ಸೋಮಯ್ಯ, ಕಳ್ಳಿಚಂಡ ಚಿಪ್ಪ ದೇವಯ್ಯ, ಮೂಕಳೇರ ಕಾವ್ಯ ಕಾವೇರಮ್ಮ, ಗುಮ್ಮಟ್ಟಿರ ಜಿ.ಗಂಗಮ್ಮ, ಪಾರುವಂಗಡ ದಿಲನ್ ಚಂಗಪ್ಪ ಮತ್ತು ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಜಂಟಿ ಕಾರ್ಯದರ್ಶಿ ಮೂಕಳೇರ ಆಶಾ ಪೂಣಚ್ಚ, ಖಜಾಂಚಿ ಮೂಕಳೇರ ಪಟ್ಟು ಲೀಲಾವತಿ, ನಿರ್ದೇಶಕಿಯರಾದ ಬಲ್ಯಮೀದೇರಿರ ಆಶಾ ಶಂಕರ್, ಕೊಟ್ಟಂಗಡ ವಿಜು ದೇವಯ್ಯ, ಚೆಕ್ಕೆರ ವಾಣಿ ಸಂಜು, ಮಾಣಿಯಪಂಡ ಪಾರ್ವತಿ ಜೋಯಪ್ಪ ಹಾಜರಿದ್ದರು. ಶಿಬಿರದಲ್ಲಿ ಸುಮಾರು 30 ಅಧಿಕ ವೈದ್ಯಕೀಯ, ವೈದ್ಯಕೀಯೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net