ಆನೆ-ಮಾನವ ಸಂಘರ್ಷಕ್ಕೆ ಸರ್ಕಾರದಿಂದ ಪರಿಹಾರವಿಲ್ಲ

ಶನಿವಾರಸಂತೆಯ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ನಮ್ಮ ಬೆಳೆಗಾರರ ಸ್ವಸಹಾಯ ಸಂಘದ ಮಹಾಸಭೆ ಆಯೋಜಿಸಲಾಗಿತ್ತು. ಟಿ.ಪಿ.ಸುರೇಂದ್ರ, ಕೆ.ಕೆ.ವಿಶ್ವನಾಥ್, ಎಸ್.ಎಂ.ಉಮಾಶಂಕರ್, ಎಸ್.ಸಿ.ಪುಟ್ಟಸ್ವಾಮಿ ಇತರರು ಇದ್ದರು.
ಶನಿವಾರಸಂತೆಯ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ನಮ್ಮ ಬೆಳೆಗಾರರ ಸ್ವಸಹಾಯ ಸಂಘದ ಮಹಾಸಭೆ ಆಯೋಜಿಸಲಾಗಿತ್ತು. ಟಿ.ಪಿ.ಸುರೇಂದ್ರ, ಕೆ.ಕೆ.ವಿಶ್ವನಾಥ್, ಎಸ್.ಎಂ.ಉಮಾಶಂಕರ್, ಎಸ್.ಸಿ.ಪುಟ್ಟಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಟಿ.ಪಿ.ಸುರೇಂದ್ರ ಬೇಸರ
  • ನಮ್ಮ ಬೆಳೆಗಾರರ ಸ್ವಸಹಾಯ ಸಂಘದ ವಾರ್ಷಿಕ ಮಹಾಸಭೆ
ಶನಿವಾರಸಂತೆ: ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಯಾವ ಸಂಘಟನೆಗಳು ಸಹಾಯಕ್ಕೆ ಬರುವುದಿಲ್ಲ. ಹಾಗಾಗಿ ಬೆಳೆಗಾರರೇ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ ಎಂದು ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಟಿ.ಪಿ.ಸುರೇಂದ್ರ ತಿಳಿಸಿದರು.
ಶನಿವಾರಸಂತೆಯ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ಆಯೋಜಿಸಿರುವ ನಮ್ಮ ಬೆಳೆಗಾರರ ಸ್ವಸಹಾಯ ಸಂಘದ ಮಹಾಸಭೆಯಲ್ಲಿ ಮಾತನಾಡಿದರು. ಸಂಶೋಧನೆಗಳು ನಡೆದ ಬಳಿಕ ಕಾಫಿಯನ್ನು ಕೃಷಿಯೆಂದು ಪರಿಗಣಿಸಲಾಗಿದೆ. ನನ್ನ ಕಾಫಿ ನನ್ನ ಹಕ್ಕು ಎಂಬಂತೆ ಹೋರಾಟವೂ ನನ್ನ ಹಕ್ಕು ಎಂಬಂತಾಗಿದೆ. ಮಾರುಕಟ್ಟೆಗೆ ಭಾರತದ ಕಾಫಿ ಮಾತ್ರ ರಫ್ತಾಗುತ್ತಿಲ್ಲ.
ವಿದೇಶದಿಂದಲೂ ಕಾಫಿ ಆಮದು ಮಾಡಿಕೊಂಡು ರಫ್ತು ಮಾಡಲಾಗುತ್ತಿದೆ. ಹಾಗಾಗಿ ಬೆಳೆಗಾರರೊಂದಿಗೆ ಸಂಘದ ಸದಸ್ಯರು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆನೆ-ಮಾನವ ಸಂಘರ್ಷಕ್ಕೆ ಸರ್ಕಾರದಿಂದ ಶಾಶ್ವತ ಪರಿಹಾರವಿಲ್ಲ. ಸಂಘದ ಪ್ರಯತ್ನಕ್ಕೆ ಪ್ರತಿ ಸ್ಪಂದನೆ ಇಲ್ಲ. ಹೋರಾಟದ ಮೂಲಕ ಭೂ ಕಬಳಿಕೆಯಿಂದ ರೈತರನ್ನು ಪಾರು ಮಾಡಬೇಕು. ಕೆಜಿಎಫ್ ಸಂಘಟನಾ ಶಕ್ತಿ ಅಪಾರವಾಗಿದೆ. ರಾಜ್ಯದಲ್ಲೂ ಕಾಫಿ ಮಂಡಳಿ ರಚಿಸಬೇಕು ಎಂದರು.
ಕೆಜಿಎಫ್ ಕೊಡಗು ಜಿಲ್ಲಾ ಉಪಾಧ್ಯಕ್ಷ ಕೆ.ಕೆ.ವಿಶ್ವನಾಥ್ ಮಾತನಾಡಿ, ಆನೆ-ಮಾನವ ಸಂಘರ್ಷ ಸ್ವಾತಂತ್ರೃ ನಂತರದ ಪ್ರಮುಖ ಸಮಸ್ಯೆಯಾಗಿದೆ. ಇದರಲ್ಲಿ ಅರಣ್ಯ ಇಲಾಖೆ, ಮಾನವ, ಸರ್ಕಾರ ಬರುತ್ತದೆ. ಕಾರ್ಮಿಕರನ್ನು ಜೀವ ಭಯ ಕಾಡುತ್ತದೆ. ಒಂದು ಅರಣ್ಯದಿಂದ ಇನ್ನೊಂದು ಅರಣ್ಯಕ್ಕೆ ಸೇರಿಸುವಂತಿಲ್ಲ. ಆನೆಗಳನ್ನು ಪಳಗಿಸಬಹುದಾದರೂ ಕೊಡಗಿನಲ್ಲಿ 1,800 ಆನೆಗಳಿವೆ. ಕಾಫಿ ಬೆಳೆಗಾರರು ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದು ಸರ್ಪೆಸಿಯೂ ಸೇರಿಕೊಂಡಿದೆ ಎಂದರು.
ನಮ್ಮ ಬೆಳೆಗಾರ ಸ್ವಸಹಾಯ ಸಂಘದ ಅಧ್ಯಕ್ಷ ಎಸ್.ಎಂ.ಉಮಾಶಂಕರ್, ಬೆಳೆಗಾರರಾದ ದಿವಾಕರ್, ರಂಗಸ್ವಾಮಿ, ದೊಡ್ಡಪ್ಪ, ರಕ್ಷಿತ್, ಚಂದ್ರಕಾಂತ್, ಧರ್ಮಪ್ಪ, ಚಂದ್ರಕಾಂತ್, ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ಎಚ್.ವಿ.ದಿವಾಕರ್, ಕಾರ್ಯದರ್ಶಿ ಎಸ್.ಸಿ.ಪುಟ್ಟಸ್ವಾಮಿ, ಖಜಾಂಚಿ ಟಿ.ಆರ್.ಕೇಶವ ಮೂರ್ತಿ, ನಿರ್ದೇಶಕರಾದ ಎಸ್.ಡಿ.ಬಸವರಾಜ್, ಎಂ.ಜೆ.ವಿನೋದ್ ಕುಮಾರ್, ಬಿ.ಎಸ್.ಪ್ರದೀಪ್, ಬಿ.ಎಸ್.ಪವನ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net