ಭಾಷೆ ಇಲ್ಲದೆ ಸಂಸ್ಕೃತಿ ಇಲ್ಲ

ಕುಶಾಲನಗರ ತಾಲೂಕಿನ ಚಿಕ್ಕತ್ತೂರು ಅರೆ ಭಾಷೆ ಒಕ್ಕೂಟದ ವತಿಯಿಂದ ಸಂತೋಷ ಕೂಟ ಆಯೋಜಿಸಲಾಗಿತ್ತು. ನಿವೃತ್ತ ಮುಖ್ಯ ಶಿಕ್ಷಕ ಸೂದನ ಗೋಪಾಲ್, ಚೆರಿಯಮನೆ ಮಾದಪ್ಪ , ಶಿಕ್ಷಕಿ ಸೂದನ ಲೀಲಾಗೋಪಾಲ್, ಕರ್ಣಯ್ಯನ ಬಸಪ್ಪ ,ಕೋಶಾಧಿಕಾರಿ ಪೊಕ್ಕುಳಂಡ್ರ ಸುಂದರ, ನಿರ್ದೇಶಕರಾದ ಕುದುಪಜೆ ಹೊನ್ನಣ್ಣ ಮತ್ತಿತರರು ಇದ್ದರು.
ಕುಶಾಲನಗರ ತಾಲೂಕಿನ ಚಿಕ್ಕತ್ತೂರು ಅರೆ ಭಾಷೆ ಒಕ್ಕೂಟದ ವತಿಯಿಂದ ಸಂತೋಷ ಕೂಟ ಆಯೋಜಿಸಲಾಗಿತ್ತು. ನಿವೃತ್ತ ಮುಖ್ಯ ಶಿಕ್ಷಕ ಸೂದನ ಗೋಪಾಲ್, ಚೆರಿಯಮನೆ ಮಾದಪ್ಪ , ಶಿಕ್ಷಕಿ ಸೂದನ ಲೀಲಾಗೋಪಾಲ್, ಕರ್ಣಯ್ಯನ ಬಸಪ್ಪ ,ಕೋಶಾಧಿಕಾರಿ ಪೊಕ್ಕುಳಂಡ್ರ ಸುಂದರ, ನಿರ್ದೇಶಕರಾದ ಕುದುಪಜೆ ಹೊನ್ನಣ್ಣ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಮುಖ್ಯ ಶಿಕ್ಷಕ ಸೂದನ ಗೋಪಾಲ್ ಅಭಿಪ್ರಾಯ
  • ಸಂತೋಷ ಕೂಟ ಉದ್ಘಾಟನೆ
ಕುಶಾಲನಗರ: ಅರೆಭಾಷೆ ಜನಾಂಗದ ಆಚಾರ-ವಿಚಾರ ಹಾಗೂ ಸಂಸ್ಕೃತಿಗಳಿಗೆ ಒತ್ತು ನೀಡುವ ಮೂಲಕ ಪರಂಪರೆ ರಕ್ಷಿಸಬೇಕೆಂದು ನಿವೃತ್ತ ಮುಖ್ಯ ಶಿಕ್ಷಕ ಸೂದನ ಗೋಪಾಲ್ ಕರೆಕೊಟ್ಟರು.
ಕುಶಾಲನಗರ ತಾಲೂಕಿನ ಚಿಕ್ಕತ್ತೂರು ಅರೆ ಭಾಷೆ ಒಕ್ಕೂಟದ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂತೋಷ ಕೂಟ ಉದ್ಘಾಟಿಸಿ ಮಾತನಾಡಿದ ಅವರು, ಭಾಷೆ ಇಲ್ಲದೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಇಲ್ಲದೆ ಭಾಷೆ ಇಲ್ಲ, ಇವೆರಡು ನಾಶವಾದರೆ ಜನಾಂಗವೇ ನಾಶವಾದಂತೆ. ಆದ್ದರಿಂದ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕು. ಯಾರೂ ಕೂಡ ಇಂತದ್ದೇ ಜಾತಿಯಲ್ಲಿ ಹುಟ್ಟಬೇಕೆಂದು ಹುಟ್ಟುವುದಿಲ್ಲ. ಅನೇಕತೆಯಲ್ಲಿ ಏಕತೆ, ಒಗ್ಗಟ್ಟಿನ ಸಹಬಾಳ್ವೆ ಮುಖ್ಯ ಎಂದರಲ್ಲದೆ 4 ಸಾವಿರ ಭಾಷೆಗಳಲ್ಲಿ ಅರೆ ಭಾಷೆ ಕೂಡ ಒಂದು ಎಂದರು.
ಅರೆ ಭಾಷೆಗೆ 5 ಶತಮಾನದ ಇತಿಹಾಸವಿದೆ. ಶ್ರೀಮಂತ ಸಂಸ್ಕೃತಿ ಇದೆ. ಸರ್ಕಾರ ರೂಪಿಸಿರುವ ಅರೆಭಾಷೆ ಅಕಾಡೆಮಿ ಭಾಷೆಗೆ ಹೆಮ್ಮೆ. ಅರೆಭಾಷೆ ಸಂಶೋಧನಾ ಕೇಂದ್ರವನ್ನು ಮಂಗಳೂರು ವಿವಿ ಆರಂಭಿಸಿದ್ದು ಅದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಚಿಕ್ಕತ್ತೂರು ಅರೆಭಾಷೆ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಚೆರಿಯಮನೆ ಮಾದಪ್ಪ ಮಾತನಾಡಿ, ಚಿಕ್ಕತ್ತೂರು ವ್ಯಾಪ್ತಿಯಲ್ಲಿ ಅಲ್ಲಲ್ಲಿ ನೆಲೆಸಿರುವ ಅರೆಭಾಷಿಗರನ್ನು ಒಂದೆಡೆ ಸೇರಿಸುವ ಪ್ರಯತ್ನದ ಫಲವಾಗಿ ಒಕ್ಕೂಟ ಸ್ಥಾಪನೆಯಾಗಿದೆ ಎಂದರು.
ಶಿಕ್ಷಕಿ ಸೂದನ ಲೀಲಾಗೋಪಾಲ್ ಮಾತನಾಡಿ, ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ಕೊಡಿಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪಿಸಲು ಕರೆಕೊಟ್ಟರು.
ಸಮಾಜದ ನಿರ್ದೇಶಕ ಕರ್ಣಯ್ಯನ ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಕೋಶಾಧಿಕಾರಿ ಪೊಕ್ಕುಳಂಡ್ರ ಸುಂದರ, ನಿರ್ದೇಶಕರಾದ ಕುದುಪಜೆ ಹೊನ್ನಣ್ಣ, ಕಡ್ಯದ ಚಂದ್ರು, ಕರುಂಬಿ ಶಿವಪ್ಪ, ಸುಳ್ಳೇಕೋಡಿ ವಿಷುಕುಮಾರ್, ಮತ್ತಾರಿ ಹರ್ಷ, ಮೊಟ್ಟನ ನಾಗರಾಜು, ದೊಡ್ಡೇರಾ ಧನಪಾಲ್, ಚೆರಿಯಮನೆ ಶೀಲಾ, ಕುದುಪಜೆ ಗಿರಿಜಾವತಿ, ಪೊಕ್ಕುಳಂಡ್ರ ತುಳಸಿ ಮಣಿ, ಸ್ಥಳದಾನಿ ಲಲಿತಾ ಕೇಸರಿ ಇದ್ದರು.
ಮಕ್ಕಳಿಗೆ ವಿವಿಧ ಆಟೋಟಗಳು, ಮಹಿಳೆಯರು ಮತ್ತು ಪುರುಷರಿಗೆ ಬಲೂನಿಗೆ ಕೋವಿಯಿಂದ ಗುರಿಯಿಟ್ಟು ಗುಂಡು ಹೊಡೆವ ಸ್ಪರ್ಧೆ ಏರ್ಪಡಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net