ಗೋಪುರದಲ್ಲಿದ್ದ ಕಲಶಗಳ ಕಳವು

ಗೋಪುರದಲ್ಲಿದ್ದ ಕಳಸವನ್ನು ಕಳ್ಳತನ ಮಾಡಿರುವ ದೇವಸ್ಥಾನ. ಎಸ್‌ಎಸ್2ಕಳ್ಳತನ ಪೂರ್ವದಲ್ಲಿದ್ದ ದೇವಸ್ಥಾನ
ಗೋಪುರದಲ್ಲಿದ್ದ ಕಳಸವನ್ನು ಕಳ್ಳತನ ಮಾಡಿರುವ ದೇವಸ್ಥಾನ. ಎಸ್‌ಎಸ್2ಕಳ್ಳತನ ಪೂರ್ವದಲ್ಲಿದ್ದ ದೇವಸ್ಥಾನ
Published on
ಶನಿವಾರಸಂತೆ: ಶನಿವಾರಸಂತೆ ಸಮೀಪದ ಮುಳ್ಳೂರು ಬಳಿಯ ಕಾರ್ಗೋಡು ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಗೋಪುರದಲ್ಲಿದ್ದ ಕಲಶಗಳನ್ನು ಖದೀಮರು ಕಳವು ಮಾಡಿದ್ದಾರೆ.
ದೇವಸ್ಥಾನದ ಗೋಪುರದಲ್ಲಿ ಪಂಚಲೋಹದ 5 ಕಲಶಗಳನ್ನು ಅಳವಡಿಸಲಾಗಿತ್ತು. ಬುಧವಾರ ರಾತ್ರಿ ಕಳ್ಳರು ಗೋಪುರದಲ್ಲಿದ್ದ 5 ಕಲಶಗಳನ್ನು ಹೊತ್ತೊಯ್ದಿದ್ದಾರೆ. ಗುರುವಾರ ಬೆಳಗ್ಗೆ ಗೋಪುರವನ್ನು ಸ್ಥಳೀಯರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನ ಸಮಿತಿಯವರು ಈ ಕುರಿತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಠಾಣಾಧಿಕಾರಿ ಚಂದ್ರು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net