ನೆಟ್‌ವರ್ಕ್ ಸಮಸ್ಯೆ: ಗುಡ್ಡಗಾಡು, ಗ್ರಾಮೀಣ ಪ್ರದೇಶಗಳಲ್ಲಿ, ಮೊಬೈಲ್ ನೆಟ್‌ವರ್ಕ್ ಸಂಪೂರ್ಣವಾಗಿ ಸುಧಾರಿಸಿಲ್ಲ. ಅನೇಕ ಕಡೆ ಮೊಬೈಲ್ ಸಿಗ್ನಲ್ ದುರ್ಬಲವಾಗಿರುವುದರಿಂದ ಆನ್‌ಲೈನ್ ಮೂಲಕ ಮಾಹಿತಿ ಅಪ್‌ಲೋಡ್ ಮಾಡುವ ಕಾರ್ಯ ವಿಳಂಬವಾಗುತ್ತಿದೆ. ಕೆಲವೆಡೆ ನೆಟ್‌ವರ್ಕ್ ದೊರೆಯುವ ಸ್ಥಳಕ್ಕೆ ತೆರಳಿ ಮಾಹಿತಿ ದಾಖಲಿಸುವ ಅನಿವಾರ್ಯತೆಯೂ ಇದೆ. ಇದರಿಂದಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಿಎಲ್‌ಒಗಳಿಗೆ ದುಸ್ತರವಾಗಿದೆ.