ಕುಡಿಯುವ ನೀರಿನ ಮಾದರಿ ಪರೀಕ್ಷಿಸಿ

 ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ  ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಫೀಲ್ಡ್ ಟೆಸ್ಟ್ ಕಿಟ್ ತರಬೇತಿ ನೀಡಲಾಯಿತು. ಮಂಜು, ಪ್ರವೀಣ್, ರಿಷಿಕಾ, ಶರತ್, ತ್ಯಾಗರಾಜು ಇದ್ದರು.
ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಫೀಲ್ಡ್ ಟೆಸ್ಟ್ ಕಿಟ್ ತರಬೇತಿ ನೀಡಲಾಯಿತು. ಮಂಜು, ಪ್ರವೀಣ್, ರಿಷಿಕಾ, ಶರತ್, ತ್ಯಾಗರಾಜು ಇದ್ದರು.
Published on
ಸೋಮವಾರಪೇಟೆ: ಪಂಚಾಯಿತಿಗಳಿಗೆ ಇಲಾಖೆಯಿಂದ ನೀಡಿರುವ ಫೀಲ್ಡ್ ಟೆಸ್ಟ್ ಕಿಟ್‌ಗಳನ್ನು ಉಪಯೋಗಿಸಿ, ಕುಡಿಯುವ ನೀರಿನ ಮಾದರಿಗಳನ್ನು ಕಾಲ ಕಾಲಕ್ಕೆ ಪರೀಕ್ಷಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ಟಿ.ಪಿ. ವೀರೇಂದ್ರ ಸೂಚಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಮಡಿಕೇರಿ ವಿಭಾಗದಿಂದ ಆಯೋಜಿಸಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಫೀಲ್ಡ್ ಟೆಸ್ಟ್ ಕಿಟ್ ಆಂದೋಲನ, ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ನೀರಿನ ಮಾದರಿ ಪರೀಕ್ಷೆಯ ವರದಿ ಪಡೆದು, ಒಂದು ವೇಳೆ ಕಲುಷಿತ ಹಾಗೂ ಕುಡಿಯಲು ಯೋಗ್ಯವಲ್ಲವೆಂದು ಕಂಡು ಬಂದಲ್ಲಿ, ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಿ ಟೆಸ್ಟ್ ಮಾಡಿಸಲು ಸೂಚನೆ ನೀಡಿದರು.
ಇದರೊಂದಿಗೆ ಅಭಿಯಾನ ಮುಗಿದ ನಂತರವೂ ಸಹ ತಮ್ಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಎಲ್ಲ ಅಂಗನವಾಡಿ ಮತ್ತು ಶಾಲೆಗಳಲ್ಲಿನ ನೀರಿನ ಮಾದರಿಗಳನ್ನೂ ಸಹ ಪರೀಕ್ಷಿಸಲು ಸೂಚಿಸಿದರು.
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಶ್ರೀನಿವಾಸ್, ರಾಕೇಶ್, ಜಲಜೀವನ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕ ಪುಟ್ಟಸ್ವಾಮಿ, ನೌಕರ ಮಂಜು, ಪ್ರಯೋಗಾಲಯ ಸಿಬ್ಬಂದಿ ಪ್ರವೀಣ್, ರಿಷಿಕಾ, ಶರತ್, ತ್ಯಾಗರಾಜು ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net