ಸೋಮವಾರಪೇಟೆ ಪ್ರೆಸ್ ತಂಡಕ್ಕೆ ಪ್ರಶಸ್ತಿ

ಸೋಮವಾರಪೇಟೆ ಸಮೀಪದ ಬಳಗುಂದ ಸರ್ಕಾರಿ ಶಾಲಾ ಮೈದಾನದಲ್ಲಿ ಅರಣ್ಯ ಇಲಾಖೆಯ ಹುಲಿಮಿತ್ರ ಯೋಜನೆ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಮವಾರಪೇಟೆ ಪ್ರೆಸ್ ತಂಡದ ಆಟಗಾರರು ಟ್ರೋಫಿ ಪಡೆದುಕೊಂಡರು. ಕೃಷ್ಣಮೂರ್ತಿ, ಗೋಪಾಲ್, ಶೈಲೇಂದ್ರ ಇದ್ದರು.
ಸೋಮವಾರಪೇಟೆ ಸಮೀಪದ ಬಳಗುಂದ ಸರ್ಕಾರಿ ಶಾಲಾ ಮೈದಾನದಲ್ಲಿ ಅರಣ್ಯ ಇಲಾಖೆಯ ಹುಲಿಮಿತ್ರ ಯೋಜನೆ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಮವಾರಪೇಟೆ ಪ್ರೆಸ್ ತಂಡದ ಆಟಗಾರರು ಟ್ರೋಫಿ ಪಡೆದುಕೊಂಡರು. ಕೃಷ್ಣಮೂರ್ತಿ, ಗೋಪಾಲ್, ಶೈಲೇಂದ್ರ ಇದ್ದರು.
Published on
ಸೋಮವಾರಪೇಟೆ: ಅರಣ್ಯ ಇಲಾಖೆಯ ಹುಲಿಮಿತ್ರ ಯೋಜನೆ ವತಿಯಿಂದ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಮವಾರಪೇಟೆ ಪ್ರೆಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಪಿಡಿಒ ತಂಡ ದ್ವಿತೀಯ ಸ್ಥಾನ ಪಡೆಯಿತು.
ಸಮೀಪದ ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ಪಂದ್ಯಗಳು ನಡೆದವು. ಸೋಮವಾರಪೇಟೆ ಪೊಲೀಸ್ ತಂಡ, ಪಿಡಿಒ ತಂಡ, ಅರಣ್ಯ ವ್ಯಾಪ್ತಿಯ ಸಾರ್ವಜನಿಕರ ತಂಡ, ಆರ್‌ಆರ್‌ಟಿ ಸೇರಿದಂತೆ ಒಟ್ಟು 10 ತಂಡಗಳು ಪಾಲ್ಗೊಂಡಿದ್ದವು. ಎರಡು ಗುಂಪುಗಳಲ್ಲಿ ತಲಾ 5 ತಂಡಗಳು ಲೀಗ್ ಹಂತದಲ್ಲಿ ಸೆಣಸಾಟ ನಡೆಸಿದವು. ಎರಡು ಗುಂಪುಗಳಿಂದ ಅಗ್ರ ಸ್ಥಾನ ಪಡೆದ ತಲಾ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದವು. ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಶನಿವಾರಸಂತೆ ಆರ್‌ಆರ್‌ಟಿ ತಂಡದ ವಿರುದ್ಧ ಪಿಡಿಒ ತಂಡ ಗೆಲವು ಸಾಧಿಸಿತು. ಎರಡನೇ ಸೆಮಿಫೈನಲ್‌ನಲ್ಲಿ ಪ್ರೆಸ್ ತಂಡ ಮತ್ತು ಆಲೂರು ಸಿದ್ದಾಪುರದ ಆರ್‌ಆರ್‌ಟಿ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಸರಣಿ ಶ್ರೇಷ್ಠ ಪ್ರಶಸ್ತಿ ಪ್ರೆಸ್ ತಂಡದ ಆಟಗಾರ ನಿಖಿಲ್, ಉತ್ತಮ ಬೌಲರ್ ಪ್ರಶಸ್ತಿಯನ್ನು ಪ್ರೆಸ್ ತಂಡದ ಆಟಗಾರ ಕಮರುದ್ದೀನ್ ಪಡೆದುಕೊಂಡರು. ಪ್ರೆಸ್ ತಂಡದ ನಾಯಕ ದುಷ್ಯಂತ್ ಕುಮಾರ್ ವಿನ್ನರ್ಸ್‌ ಟ್ರೋಫಿ ಸ್ವೀಕರಿಸಿದರು. ಸೋಮವಾರಪೇಟೆ ತಾಲೂಕು ತಹಸೀಲ್ದಾರ್ ಕೃಷ್ಣಮೂರ್ತಿ, ಎಸಿಎಫ್ ಗೋಪಾಲ್, ಆರ್‌ಎಫ್‌ಒ ಶೈಲೇಂದ್ರಕುಮಾರ್, ಪಟ್ಟಣ ಪಂಚಾಯಿತಿ ಅಧಿಕಾರಿ ಕೃಷ್ಣಪ್ರಸಾದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net