ದೇವಾಲಯಗಳಿಂದ ಸಮಾಜಮುಖಿ ಕೆಲಸ

ರಘುರಾಮ ಸಭಾ ಭವನದ ಉದ್ಘಾಟನೆಯನ್ನು ಅತಿಥಿಗಳು ನೇರವೇರಿಸುತ್ತಿರುವುದು.
ರಘುರಾಮ ಸಭಾ ಭವನದ ಉದ್ಘಾಟನೆಯನ್ನು ಅತಿಥಿಗಳು ನೇರವೇರಿಸುತ್ತಿರುವುದು.
Published on
ಸುಂಟಿಕೊಪ್ಪ: ದೇವಾಲಯ ಶ್ರದ್ಧಾಭಕ್ತಿಯ ಕೇಂದ್ರವಾಗಿ ಮಾತ್ರ ಉಳಿಯದೆ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡಿದ್ದು ಅದರ ರೂಪವಾಗಿ ರಘುರಾಮ ಸಭಾಭವನದ ಉದ್ಘಾಟನೆ ನಡೆದಿದ್ದು, ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಅಭಿವೃದ್ಧಿಯನ್ನು ದೇವರು ಅನುಗ್ರಹಿಸಲಿ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಪ್ರಾರ್ಥಿಸಿದರು.
ಭಾನುವಾರ ಕಂಬಿಬಾಣೆಯಲ್ಲಿರುವ ಶ್ರೀರಾಮ ಮತ್ತು ಶ್ರೀಚಾಮುಂಡೇಶ್ವರಿ ದೇವಸ್ಥಾನದ 11ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವದಲ್ಲಿ ಪಾಲ್ಗೊಂಡು ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ರಘುರಾಮ ಸಭಾ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಎಂ.ಪಿ.ಅಪ್ಪಚ್ಚು ರಂಜನ್ ಅವರೊಂದಿಗೆ ಸಭಾ ಭವನದ ದಾನಿಗಳಾದ ಮ್ಯಾಗಡೂರು ತೋಟದ ಮಾಲೀಕರಾದ ಟಿ.ಕೆ.ಸಜೀವ ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರರಾದ ಟಿ.ಕೆ.ಸಾಯಿಕುಮಾರ್ ಮತ್ತು ಟಿ.ಕೆ.ರಾಜೀವ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಟಿ.ಕೆ.ಸಾಯಿಕುಮಾರ್ ಮಾತನಾಡಿ, ನಮ್ಮ ತಂದೆ ಕುಮಾರನ್ ಅವರ ನೆನಪಿನಲ್ಲಿ ನನ್ನ ಹಿರಿಯ ಸಹೋದರ ಟಿ.ಕೆ.ಸಜೀವ ಅವರು ಜನೋಪಯೋಗಿ ದೃಷ್ಟಿಯಿಂದ ರಘುರಾಮ ಸಭಾ ಭವನವನ್ನು 7 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ದೇವಾಲಯ ಸಮಿತಿ ಅಧ್ಯಕ್ಷ ಡಾ.ಶಶಿಕಾಂತ ರೈ ಮತ್ತು ಅವರ ತಂಡ ಅಭಿನಂದನೆಗೆ ಅರ್ಹರಾಗಿದ್ದು, ಪ್ರತಿಯೊಬ್ಬರಿಂದ ಅಳಿಲು ಸೇವೆ ಅಪೇಕ್ಷಿಸಿ ಈ ಭವ್ಯವಾದ ಸಭಾ ಭವನವನ್ನು ನಿರ್ಮಿಸಿದ್ದಾರೆ. ಇಲ್ಲಿ ಸಂಗೀತ, ನೃತ್ಯ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದು, ಮುಂದುವರಿಯಲಿ ಎಂದು ಆಶಿಸಿದರು.
ಟಿ.ಕೆ.ರಾಜೀವ್ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ಒಂದನೇ ಮತ್ತು 2 ತರಗತಿ ವಿದ್ಯಾಭ್ಯಾಸ ಮಾಡಿದ್ದನ್ನು ನೆನಪಿಸಿಕೊಂಡು ಇಂದು ದೇವಾಲಯ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹೆಮ್ಮರವಾಗಿ ಬೆಳೆದಿದ್ದನ್ನು ಪ್ರಶಂಸಿಸಿದರು.
ಅಧ್ಯಕ್ಷತೆಯನ್ನು ಶ್ರೀರಾಮ ಮತ್ತು ಶ್ರೀಚಾಮುಂಡೇಶ್ವರಿ ಸಮಿತಿ ಅಧ್ಯಕ್ಷ ಡಾ.ಶಶಿಕಾಂತ ರೈ ವಹಿಸಿದ್ದರು.
ಉದ್ಘಾಟನೆಗೂ ಮೊದಲು ಕ್ಷೇತ್ರದ ತಂತ್ರಿಗಳಾದ ಶ್ರೀವೇದಮೂರ್ತಿ ಭಾಸ್ಕರ ಕಲ್ಲುರಾಯ ಕ್ಷೇತ್ರದ ಅರ್ಚಕರಾದ ಪ್ರಭಾಕರ ಕುಂದಣ್ಣಯ್ಯ ನೇತೃತ್ವದಲ್ಲಿ ಪೂಜೆ ನೆರವೇರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net