ಪುದಿಯೋಕ್ಕಡ-ಬಲ್ಲಚಂಡ ಮಧ್ಯೆ ಜಿದ್ದಾಜಿದ್ದಿನ ಹೋರಾಟ

ನಾಪೋಕ್ಲುವಿನ  ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿಆಯೋಜಿಸಲಾಗಿರುವ ಚೇನಂಡ  ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಗುರುವಾರದ ಪಂದ್ಯ
ನಾಪೋಕ್ಲುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಗುರುವಾರದ ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ಚೇನಂಡ ಕೊಡವ ಕೌಟುಂಬಿಕ ಹಾಕಿ
ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಗುರುವಾರದ ಪಂದ್ಯಗಳಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡು ಬಂತು.
ಪುದಿಯೋಕ್ಕಡ ಮತ್ತು ಬಲ್ಲಚಂಡ ತಂಡಗಳ ನಡುವೆ ಬಿರುಸಿನ ಹೋರಾಟ ನಡೆಯಿತು. ಪಂದ್ಯದಲ್ಲಿ ಎರಡು ತಂಡಗಳು 1-1ಅಂತರದ ಸಮಬಲದ ಪ್ರದರ್ಶನ ನಡೆಸಿದವು. ಬಳಿಕ ಟೈ ಬ್ರೇಕರ್ ನಲ್ಲಿ ಪುದಿಯೋಕ್ಕಡ ತಂಡ 5 ಗೋಲು ಗಳಿಸಿದರೆ, ಬಲ್ಲಚಂಡ ತಂಡ ಆಟಗಾರರು 6 ಗೋಲು ಹೊಡೆಯುವುದರ ಮೂಲಕ ಜಯ ಸಾಧಿಸಿದರು.
ಅಂಜಪರವಂಡ ಮತ್ತು ಅರಮಣಮಾಡ ತಂಡಗಳ ನಡುವೆಯೂ ಸಮಬಲದ ಹೋರಾಟ ನಡೆಯಿತು. ಪಂದ್ಯದಲ್ಲಿ ಎರಡು ತಂಡಗಳು ಗೋಲು ಗಳಿಸಲಿಲ್ಲ. ಬಳಿಕ ಟೈ ಬ್ರೇಕರ್ ನಲ್ಲಿ ಆರಮಣಮಾಡ 4-2ರಿಂದ ಅಂಜಪರವಂಡ ವಿರುದ್ಧ ಗೆಲುವು ಸಾಧಿಸಿತು. ಮುಕ್ಕಾಟಿರ ಮತ್ತು ಸೋಮೆಯಂಡ ತಂಡಗಳ ನಡುವೆಯೂ ಸಮಬಲದ ಹೋರಾಟ ನಡೆಯಿತು. ಎರಡು ತಂಡಗಳು ತಲಾ ಎರಡು ಗೋಲು ಗಳಿಸಿದವು. ಬಳಿಕ ನಡೆದ ಟೈ ಬ್ರೇಕರ್ ನಲ್ಲಿ ಸೋಮೆಯಂಡ 4-3 ರಿಂದ ಮುಕ್ಕಾಟಿರ ವಿರುದ್ಧ ಗೆಲುವು ಸಾಧಿಸಿತು.
ಉಳಿದಂತೆ ಕೋಳೆರ ಕರೋಟಿರ ವಿರುದ್ಧ 4-1 ರಿಂದ ಕೊಲ್ಲೀರ, ನಂದೇಟಿರ ವಿರುದ್ಧ 2-1ರಿಂದ ನೆಲ್ಲಮಕ್ಕಡ, ಮುಕ್ಕಾಟಿರ ವಿರುದ್ಧ 4-0 ಯಿಂದ ಕುಪ್ಪಂಡ, ಚಂದುರ ವಿರುದ್ಧ 3-0ಯಿಂದ ಚೆಪ್ಪುಡಿರ, ನಾಗಂಡ ವಿರುದ್ಧ 4-0ಯಿಂದ ಕಂಬೀರಂಡ, ಮಣವಟ್ಟಿರ ವಿರುದ್ಧ 2-0 ಯಿಂದ ಮುಕ್ಕಾಟಿರ ಗೆಲುವು ಸಾಧಿಸಿದವು.
23-ಎನ್ ಪಿ ಕೆ-10.
===========================================================
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net