ಮಾದರಿ ಕೃಷಿಕರಾದ ಪಂದಿಕಂಡ ಜಯ ಬೋಪಣ್ಣ, ಪಡಿಞರಂಡ ವೇಣುಕುಮಾರ್, ರಾಷ್ಟ್ರೀಯ ವೆಟರನ್ ಅಥ್ಲೆಟಿಕ್ ಮೀಟಲ್ ಸಾಧಕಿ ಮೂರೀರ ಶಾಂತಿ ಬೆಳ್ಳಿಯಪ್ಪ, ಅಚ್ಚಪಂಡ ಟೀನಾ ಸೋಮಣ್ಣ ಅವರನ್ನು ಸನ್ಮಾನಿಸಲಾಗುವುದು. ಎಸ್‌ಎಸ್‌ಎಲ್‌ಸಿ, ಪಿಯು ಹಾಗೂ ಪದವಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸಮಾಜದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುತ್ತದೆ ಎಂದು ಸಮಾಜದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.