ಅಡಕೆ ಬೆಳೆಯತ್ತ ತೆರಳಿದ್ದೇವೆ: ಅಕಾಲಿಕ ಮಳೆ, ಬರ, ಅತಿವೃಷ್ಟಿಯಾದರೂ ಭತ್ತ ಬೆಳೆಯುತ್ತಿದ್ದೆವು. ಆದರೆ ಕಾಡುಪ್ರಾಣಿಗಳ ಹಾವಳಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಭತ್ತ ಹೂ ಬಿಡುವ ಸಂದರ್ಭದಲ್ಲೇ ಕಾಡಾನೆಗಳು, ಕಾಡುಕೋಣ, ಕಾಡುಹಂದಿಗಳು ತಿಂದು ನಾಶ ಮಾಡುತ್ತವೆ. ಕಾಡುಪ್ರಾಣಿಗಳು ತಿಂದು ಉಳಿಸಿದ ಫಸಲನ್ನು ತೆಗೆದುಕೊಳ್ಳುವಂತ ಪರಿಸ್ಥಿತಿ ಇದೆ. ಒಂದು ಲಕ್ಷ ರೂ. ಫಸಲು ನಷ್ಟವಾದರೆ, ಒಂದೆರಡು ಸಾವಿರ ರೂ. ಪರಿಹಾರ ಸಿಗುತ್ತದೆ. ಅರ್ಜಿ ಸಲ್ಲಿಸಲು ಸೂಕ್ತ ದಾಖಲೆಗಳನ್ನು ಜೋಡಿಸಲು ಎರಡು ಸಾವಿರ ರೂ. ಖರ್ಚು ಮಾಡಬೇಕು. ಇವೆಲ್ಲಾ ಯಾಕೆ, ಗದ್ದೆ ಭೂಮಿಯನ್ನು ಸಮತಟ್ಟು ಮಾಡಿ, ಅಡಕೆ ಬೆಳೆಯುತ್ತಿದ್ದೇನೆ.