ಇನ್ನರ್ ವ್ಹೀಲ್‌ಕ್ಲಬ್‌ನಿಂದ ಸಮಾಜಮುಖಿ ಕಾರ್ಯ

ಸೋಮವಾರಪೇಟೆ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಬಡ ರೋಗಿಗಳಿಗೆ ಸಹಾಯಧನ ನೀಡಲಾಯಿತು. ಲತಾ, ವನಿತಾ, ರಾಜೇಶ್ವರಿ, ಡಾ.ಜಮೀರ್ ಇದ್ದರು.
ಸೋಮವಾರಪೇಟೆ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಬಡ ರೋಗಿಗಳಿಗೆ ಸಹಾಯಧನ ನೀಡಲಾಯಿತು. ಲತಾ, ವನಿತಾ, ರಾಜೇಶ್ವರಿ, ಡಾ.ಜಮೀರ್ ಇದ್ದರು.
Published on
ಸೋಮವಾರಪೇಟೆ: ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ವರು ಡಯಾಲಿಸಸ್ ರೋಗಿಗಳಿಗೆ ಜೀವನಾಧಾರ ಯೋಜನೆ ಡಯಾಲಿಸಿಸ್ ಸಪ್ತಾಹ ಅಂಗವಾಗಿ ಇನ್ನರ್ ವ್ಹೀಲ್‌ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಈಚೆಗೆ ಸಹಾಯ ಧನ ನೀಡಲಾಯಿತು.
ಕ್ಲಬ್‌ನ ಅಧ್ಯಕ್ಷೆ ಲತಾ ಮಂಜು ಮಾತನಾಡಿ, ಸೇವೆ ನಮ್ಮ ಸಂಸ್ಕೃತಿಯಾದರೆ, ಸಮಾಜಸೇವೆ ನಮ್ಮ ಸಂಕಲ್ಪ ಎಂಬ ಧ್ಯೇಯದೊಂದಿಗೆ ಸಂಸ್ಥೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಕ್ಲಬ್‌ನ ಸದಸ್ಯರ ನಿಸ್ವಾರ್ಥ ಸೇವೆಯಿಂದ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಕ್ಲಬ್ ಕಾರ್ಯದರ್ಶಿ ವನಿತಾ ಜಯರಾಮ್, ಖಜಾಂಚಿ ಲತಾ ನಾಗೇಶ್, ಎಡಿಟರ್ ರಾಜೇಶ್ವರಿ ಸುರೇಶ್, ಐಎಸ್‌ಒ ದಿವ್ಯ ದಯಾಕರ್ ಇದ್ದರು. ಆಡಳಿತ ವೈದ್ಯಾಧಿಕಾರಿ ಡಾ.ಜಮೀರ್ ಅಹಮ್ಮದ್, ಡಯಾಲಿಸಿಸ್ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net