ಎಸ್‌ಐಆರ್ ಹೆಲ್ಪ್ ಡೆಸ್ಕ್ ಉದ್ಘಾಟನೆ

ಚೆರಿಯ ಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಬಳಿ ಎಸ್‌ಐಆರ್ ಹೆಲ್ಪ್ ಡೆಸ್ಕ್ ಅನ್ನು ಗುರುವಾರ ಉದ್ಘಾಟಿಸಲಾಯಿತು. ವಲಯ ಅಧ್ಯಕ್ಷ ಕುಶಾಲಪ್ಪ, ಗ್ಯಾರಂಟಿ ಸಮಿತಿ ಸದಸ್ಯ ಪಿ.ಎಂ.ಆರಾಫತ್, ವಲಯ ಕಾಂಗ್ರೆಸ್ ಸದಸ್ಯರಾದ ಕರೀಂ, ಸಾಧುಲಿ, ಹಾರಿಸ್, ಬಷೀರ್ ಇತರರು ಇದ್ದರು.

Published on
ನಾಪೋಕ್ಲು: ಸಮೀಪದ ಚೆರಿಯ ಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಬಳಿ ಸಮಗ್ರ ಮತಪಟ್ಟಿ ಪರಿಷ್ಕರಣೆ ಸಂಬಂಧ ಸಾರ್ವಜನಿಕರ ಅನುಕೂಲಕ್ಕಾಗಿ ಹೆಲ್ಪ್ ಡೆಸ್ಕ್ ಅನ್ನು ಗುರುವಾರ ಉದ್ಘಾಟಿಸಲಾಯಿತು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿ, ನಾಪೋಕ್ಲು ಮತ್ತು ಬೇತು ಗ್ರಾಮದ ಮತದಾರರ ಅನುಕೂಲಕ್ಕಾಗಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ. ಮತದಾರರ ಪಟ್ಟಿ ಪರಿಶೀಲನೆಗೆ ಸಂಬಂಧ ಮತದಾರರು ಅಗತ್ಯವಿರುವ ಮಾಹಿತಿಗಳನ್ನು ಹೆಲ್ಪ್ ಡೆಸ್ಕ್ ಮೂಲಕ ಪಡೆಯಬಹುದು ಎಂದರು.
ವಲಯ ಅಧ್ಯಕ್ಷ ಕುಶಾಲಪ್ಪ, ಗ್ಯಾರಂಟಿ ಸಮಿತಿ ಸದಸ್ಯ ಪಿ.ಎಂ.ಆರಾಫತ್, ವಲಯ ಕಾಂಗ್ರೆಸ್ ಸದಸ್ಯರಾದ ಕರೀಂ, ಸಾಧುಲಿ, ಹಾರಿಸ್, ಬಷೀರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net