ಸುಬ್ರಹ್ಮಣ್ಯ ದೇವಾಲಯದ ವಾರ್ಷಿಕೋತ್ಸವ ವಿಜೃಂಭಣೆ

ಕರಡಿಗೋಡು ಶ್ರೀ ಸುಬ್ರಮಣ್ಯ ದೇವರ ಗುಡಿ
ಕರಡಿಗೋಡು ಶ್ರೀ ಸುಬ್ರಮಣ್ಯ ದೇವರ ಗುಡಿ
Published on
ಸಿದ್ದಾಪುರ: ಕರಡಿಗೋಡು ಶ್ರೀ ಸುಬ್ರಹ್ಮಣ್ಯ ದೇವಾಲಯದ ವಾರ್ಷಿಕೋತ್ಸವ ಹಾಗೂ ಪಳನಿ ಯಾತ್ರೆ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ಸೋಮವಾರ ನೆರವೇರಿತು.
ದೇವಾಲಯದ ಅರ್ಚಕಿ ಸುಶೀಲಮ್ಮ ಹಾಗೂ ಹುಂಡಿಯ ನಾರಾಯಣಿ ನೇತೃತ್ವದಲ್ಲಿ ಕಳೆದ 22 ವರ್ಷಗಳಿಂದ ಪಳನಿ ಯಾತ್ರೆ ಕೈಗೊಳ್ಳಲಾಗುತ್ತಿದ್ದು, ಈ ವರ್ಷವೂ ಭಕ್ತಿಭಾವದಿಂದ ಕಾರ್ಯಕ್ರಮಗಳು ನಡೆದವು.
ಸಂಜೆ 6 ಗಂಟೆಗೆ ದೀಪಾರಾಧನೆ, 6.30ಕ್ಕೆ ಗಣಪತಿ ಹೋಮ, 7 ಗಂಟೆಗೆ ಅಪ್ಪಂ ಬಾಚುವ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಕುದಿಯುವ ಎಣ್ಣೆಯಲ್ಲಿ ಅಮ್ಮನವರ ವಿಶೇಷ ಸ್ನಾನ ವಿಧಿ ನೆರವೇರಿತು. ಬಳಿಕ ಮಹಾಪೂಜೆ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ನಡೆಯಿತು. ಕಾರ್ಯಕ್ರಮದ ಅಂತ್ಯದಲ್ಲಿ 30 ವ್ರತಧಾರಿಗಳು ಭಕ್ತಿಭಾವದಿಂದ ಪಳನಿ ಯಾತ್ರೆಗೆ ತೆರಳಿದರು.
ಈ ವೇಳೆ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net