ಬಿಳುಗುಂದ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

ಬಿಳುಗುಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು. ಐನಂಡ ಪ್ರಕಾಶ್ ಗಣಪತಿ, ಲೀನಾ ಗಣಪತಿ, ಎಚ್.ಜಿ.ಸಾವಿತ್ರಿ, ಭವ್ಯಾ, ಲೀಲಾವತಿ, ಹೇಮಾವತಿ ಇದ್ದರು.
ಬಿಳುಗುಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು. ಐನಂಡ ಪ್ರಕಾಶ್ ಗಣಪತಿ, ಲೀನಾ ಗಣಪತಿ, ಎಚ್.ಜಿ.ಸಾವಿತ್ರಿ, ಭವ್ಯಾ, ಲೀಲಾವತಿ, ಹೇಮಾವತಿ ಇದ್ದರು.
Published on
ವಿರಾಜಪೇಟೆ: ಬಿಳುಗುಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಜ್ವಾಲಾಮುಖಿಯ ಮಾದರಿಯಲ್ಲಿ ಲಾವಾರಸ ಹೊರಹೊಮ್ಮಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ಗಣಿತದ ಆಕೃತಿಗಳನ್ನು ಮತ್ತು ವಿಜ್ಞಾನದ ಹಲವು ಮಾದರಿಗಳನ್ನು, ರಂಗೋಲಿಗಳನ್ನು ರಚಿಸಿ ಪ್ರದರ್ಶಿಸಿ, ಅದರ ಕಾರ್ಯ ವೈಖರಿಯನ್ನು ವೇದಿಕೆಯಲ್ಲಿ ಪ್ರದರ್ಶಿಸಿ ವಿವರಿಸಿದರು. ಅತಿಥಿಗಳು ವಿದ್ಯಾರ್ಥಿಗಳಿಗೆ ಪ್ರಯೋಗಗಳಲ್ಲಿ ಹಾಗೂ ಮಾದರಿಗಳ ನಿರ್ಮಾಣದಲ್ಲಿ ಇರುವ ಆಸಕ್ತಿಯನ್ನು ಕಂಡು ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಸಮಾಜ ಸೇವಕರೂ ಆದ ಐನಂಡ ಪ್ರಕಾಶ್ ಗಣಪತಿ, ಲೀನಾ ಗಣಪತಿ ಹಾಗೂ ನಿವೃತ ಶಿಕ್ಷಕಿ ಎಚ್.ಜಿ. ಸಾವಿತ್ರಿ ಪಾಲ್ಗೊಂಡಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಡಾ. ಆರ್.ರವಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಗಣಿತ ಶಿಕ್ಷಕಿ ಅರುಣಾ ಆನ್ಸಿ ಡಿಸೋಜಾ ಹಾಗೂ ವಿಜ್ಞಾನ ಶಿಕ್ಷಕಿ ರೂಪಾ ಕಡೇಮನಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.
ಶಿಕ್ಷಕರಾದ ವಿ.ಕೆ.ಲೀಲಾವತಿ, ಪಿ.ಎಸ್. ಭವ್ಯಾ, ಎಸ್.ಡಿ. ಅನಿತಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪಿ.ಎನ್.ಹೇಮಾವತಿ, ಸಹ ಶಿಕ್ಷಕಿ ಎಸ್.ಜಿ. ಲಿನ್ನಿ ಹಾಗೂ ಸವಿತಾ ಮಹದೇವ ನಾಯಕ, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net