ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ

 ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ನಡೆದ ಮಕ್ಕಳ ಬಾಲ್ಯ ಕಟ್ಟುವ ಹಬ್ಬದಲ್ಲಿ ಭಾಗವಹಿಸಿದ್ದ ಮಕ್ಕಳು. ಸುಮನಾ, ಗೌತಮ್, ಡಾ.ಸಂಜೀವ್, ಪದ್ಮನಾಭ ಇದ್ದರು
ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ನಡೆದ ಮಕ್ಕಳ ಬಾಲ್ಯ ಕಟ್ಟುವ ಹಬ್ಬದಲ್ಲಿ ಭಾಗವಹಿಸಿದ್ದ ಮಕ್ಕಳು. ಸುಮನಾ, ಗೌತಮ್, ಡಾ.ಸಂಜೀವ್, ಪದ್ಮನಾಭ ಇದ್ದರು
Published on

ಪ್ರಮುಖ ಮುಖ್ಯಾಂಶಗಳು

  • ನಾವು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಸುಮನಾ ಕಿವಿಮಾತು
  • ಚಿಣ್ಣರ ಶಿಬಿರ
ಸೋಮವಾರಪೇಟೆ : ಪಟ್ಟಣದ ಮಹಿಳಾ ಸಮಾಜದಲ್ಲಿ ನಾವು ಸಂಸ್ಥೆ ಹಾಗೂ ಗುಡ್ ಮೈಂಡ್ಸ್ ವತಿಯಿಂದ ಹದಿನೈದು ದಿನಗಳ ಕಾಲ ಆಯೋಜಿಸಿದ್ದ ಮಕ್ಕಳ ಬಾಲ್ಯ ಕಟ್ಟುವ ಹಬ್ಬ ಹೆಸರಿನ ಮಕ್ಕಳ ಶಿಬಿರ ಶನಿವಾರ ಮುಕ್ತಾಯಗೊಂಡಿತು.
ಮಕ್ಕಳು ತಾವೇ ರಚಿಸಿದ ಕವಿತೆಗಳು, ಕಥೆಗಳು, ನಾಟಕಗಳು, ನಟನೆ, ನಿರೂಪಣೆ ಹಾಗೂ ನೃತ್ಯಗಳ ಮೂಲಕ ತಮ್ಮ ಕಲಾತ್ಮಕ ಸಾಮರ್ಥ್ಯವನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ಗ್ರಾಮೀಣ ಆಟಗಳನ್ನು ಕಲಿತ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ನಾವು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಸುಮನಾ ಮಾತನಾಡಿ, ಈ ಅವಧಿಯಲ್ಲಿ ಮಕ್ಕಳ ಸೃಜನಾತ್ಮಕತೆ ಮತ್ತು ಪ್ರತಿಭೆಯನ್ನು ಉತ್ತೇಜಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮಕ್ಕಳನ್ನು ಹೋಲಿಕೆ ಮಾಡುವುದಕ್ಕಿಂತ ಅವರ ಸ್ವಭಾವ ಮತ್ತು ಆಸಕ್ತಿಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಮಕ್ಕಳನ್ನು ಇರುವಂತೆ ಸ್ವೀಕರಿಸಬೇಕಿದೆ. ಎಲ್ಲ ಮಕ್ಕಳ ವಿಭಿನ್ನ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಪ್ರತಿಯೊಬ್ಬ ಮಗುವಿನ ವೈಶಿಷ್ಟ್ಯತೆಯನ್ನು ಗೌರವಿಸಲೇಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಜತೆಗೆ, ಅವರ ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ವೇದಿಕೆಯನ್ನು ಒದಗಿಸುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿತ್ತು ಎಂದು ಹೇಳಿದರು.
ನಾವು ಸಂಸ್ಥೆಯ ಸಂಸ್ಥಾಪಕ ಗೌತಮ್ ಕಿರಗಂದೂರು ಮಾತನಾಡಿ, ಮಕ್ಕಳ ಸೃಜನಶೀಲತೆ ಸಮಾಜದ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಂಜೀವ್ ಕುಮಾರ್ ಮತ್ತು ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಅವರು ಮಕ್ಕಳ ಮನೋವಿಕಾಸದ ಬಗ್ಗೆ ಮಾರ್ಗದರ್ಶನ ನೀಡಿದರು. ಮಕ್ಕಳ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಪ್ರತಿಭೆಯನ್ನು ಮೆಚ್ಚಿದರು.
ಮಕ್ಕಳ ಬಾಲ್ಯ ಕಟ್ಟುವ ಹಬ್ಬದ ಅಂಗವಾಗಿ ಹಕ್ಕಿಗೊಂದು ಗುಟುಕು-2026 ಅಭಿಯಾನದಲ್ಲಿ ಭಾಗವಹಿಸಿ ವಿಜೇತರಾದ ಕಾಸರಗೋಡುವಿನ ಕಿರಣ್, ಉಡುಪಿಯ ಅನಾಘಗೆ ಬಹುಮಾನ ವಿತರಿಸಲಾಯಿತು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net