ಆರಾಯಿರ ನಾಡ್ ಪೂಮಾಲೆ ಮಂದ್ ವಿರಾಜಪೇಟೆ ವತಿಯಿಂದ ಪೂಮಾಲೆ ಮಂದ್‌ನಲ್ಲಿ ವಾರ್ಷಿಕ ಪುತ್ತರಿ ಕೋಲಾಟ್ ಪ್ರದರ್ಶನ ವಿಜೃಂಭಣೆಯಿಂದ ಜರುಗಿತು. ಭೈರವನಾಡ್ ಎಡೆನಾಡ್, ಬೇಟೋಳಿನಾಡ್, ಪೊರೆವನಾಡ್ ಮತ್ತು ಕುಕ್ಲೂರು ಗ್ರಾಮ ನಾಡುಗಳು, ಐಮಂಗಲ, ಚೆಂಬೆಬೆಳ್ಳೂರು, ಮಗ್ಗುಲ, ತಲಕಟ್ಟಕೇರಿ, ದೇವಣಗೇರಿ, ಹಾಲುಗುಂದ, ಭೈರನಾಡ್, ಬೇಟೋಳಿ, ಆರ್ಜಿ, ನಾಂಗಾಲ, ಕುಕ್ಲೂರು, ಕಣ್ಣಂಗಾಲ, ವೈಪಡ( ಮಗ್ಗುಲ) ಬಿಟ್ಟಂಗಾಲ, ಹಚ್ಚಿನಾಡ್ (ಪಚ್ಚಾಟ್) ಪೆಗ್ಗಳ, ಬಾಳೂಗೋಡು ಗ್ರಾಮಗಳ ಜನರು ಕೊಡವ ಸಾಂಪ್ರದಾಯಿಕ ಧರಿಸಿನಲ್ಲಿ ಪೂಮಾಲೆ ಮಂದ್‌ಗೆ ಪ್ರವೇಶ ಮಾಡಿದರು. ನಂತರ ಊರು, ತಕ್ಕ, ನಾಡ್ ತಕ್ಕರಿಗೆ ಮಂದ್ ಸಮಿತಿಯ ಪದಾಧಿಕಾರಿಗಳು ಹೂಮಾಲೆ ಹಾಕಿ ಬರಮಾಡಿಕೊಂಡರು. ಎಲ್ಲ ಊರುಗಳ ಬಾಂಧವರಿಂದ ಮೂರು ಸುತ್ತುಗಳ ಕೋಲಾಟ್ ಪ್ರದರ್ಶನ ನಡೆಯಿತು. ಏಳು ಜೋಡಿಗಳಿಂದ ಪರೆಯ ಕಳಿ ನಡೆಯಿತು. ತ್ರಿವೇಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಉಮ್ಮತ್ತಾಟ್, ಬೊಳಕಾಟ್ ಪ್ರದರ್ಶನ ನಡೆಯಿತು.