ಬ್ಲಾಕ್ ಪ್ಯಾಂಥರ್ಸ್ ತಂಡ ಪ್ರಥಮ

ವಿರಾಜಪೇಟೆ: ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಹಬ್ಬ ಆಯೋಜನೆಯಿಂದಾಗಿ ಉತ್ತಮ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ.ಗಣೇಶ್ ಹೇಳಿದರು.
ವಿರಾಜಪೇಟೆ: ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಹಬ್ಬ ಆಯೋಜನೆಯಿಂದಾಗಿ ಉತ್ತಮ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ.ಗಣೇಶ್ ಹೇಳಿದರು.
Published on
ವಿರಾಜಪೇಟೆ: ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಹಬ್ಬ ಆಯೋಜನೆಯಿಂದಾಗಿ ಉತ್ತಮ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ.ಗಣೇಶ್ ಹೇಳಿದರು.
ಯೂತ್ ಫ್ರೆಂಡ್ಸ್ ಪೆರುಂಬಾಡಿ ಸಹಯೋಗದಲ್ಲಿ ಬಾಳುಗೋಡು ಅಯ್ಯಪ್ಪ ಭಜನಾ ಮಂದಿರದ ಆವರಣದಲ್ಲಿ ಮಹಾಶಿವ ರಾತ್ರಿ ಪ್ರಯುಕ್ತ ಆಯೋಜಿಸಿದ್ದ ಐದನೇ ವರ್ಷದ ಹೊನಲು ಬೆಳಕಿನ ಪ್ರೋ ಮ್ಯಾಟ್ ಕಬಡ್ಡಿ ಲೀಗ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮಗಳ ನಡುವೆ ಉತ್ತಮ ಬಾಂಧವ್ಯ ಹೊಂದಲು ಕ್ರೀಡೆಗಳು ಸಹಕಾರಿ. ಹಬ್ಬದ ಆಚರಣೆಯೊಂದಿಗೆ ಕ್ರೀಡೆಗೆ ಗೌರವ ಕಲ್ಪಿಸಿ. ಗ್ರಾಮಸ್ಥರಿಗೆ ಹಬ್ಬದ ವಾತಾವರಣ ನಿರ್ಮಿಸಲು ಕ್ರೀಡೆಗಳು ಪರಿಣಾಮಕಾರಿ ಪಾತ್ರ ವಹಿಸುತ್ತವೆ. ಕ್ರೀಡೆಗಳ ಆಯೋಜನೆಗೆ ಸಂಘಟಕರಿಗೆ ನೆರವು ನೀಡುವುದು ಗ್ರಾಮಸ್ಥರ ಭಾಗವಾಗಬೇಕು ಎಂದು ಹೇಳಿದರು.
ಪ್ರಮುಖರಾದ ಸಿ.ಆರ್.ಬಾಬು ಮಾತನಾಡಿ, ಗ್ರಾಮ ಮಟ್ಟದಲ್ಲಿ ಕ್ರೀಡೆಗಳ ಆಯೋಜನೆಗಳು ಕಷ್ಟ ಸಾಧ್ಯವಾದರೂ ಸತತ ಐದು ವರ್ಷಗಳಿಂದ ಕಬಡ್ಡಿ ಲೀಗ್ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಗ್ರಾಮದಲ್ಲಿ ನಡೆಯುವ ಎಲ್ಲ ಹಬ್ಬ ಹರಿದಿನಗಳಲ್ಲಿ ಗ್ರಾಮಸ್ಥರು ಭಾಗಿಯಾಗಿ ಸಂಘಟಕರಿಗೆ ಬೆಂಬಲ ನೀಡಲು ಮುಂದಾಗಬೇಕು ಎಂದರು.
ಯೂತ್ ಫ್ರೆಂಡ್ಸ್ ಅಧ್ಯಕ್ಷ ಹರೀಶ್ ಕುಟ್ಟಿ, ಅಚ್ಚಪಂಡ ಮಹೇಶ್ ಗಣಪತಿ, ಕೆಡಿಪಿ ಸದಸ್ಯ ಶಶಿ, ಮಾಜಿ ಸೈನಿಕ ವಾಸು, ಕೆ.ಕೆ.ಅನೀಲ್ ಕುಮಾರ್, ಯೂತ್ ಫ್ರೆಂಡ್ಸ್‌ನ ನಿಕೀಲ್ ಉನ್ನಿ, ಶಿವಪ್ಪ ಹಾಜರಿದ್ದರು.
ಪಂದ್ಯಗಳ ವಿವರ:
ಎರಡು ದಿನಗಳ ಕಾಲ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಹೆಗ್ಗಳ, ಪೆರುಂಬಾಡಿ, ಬೋಯಿಕೇರಿ, ವಿರಾಜಪೇಟೆ ನಗರಗಳ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಪ್ರಥಮ ಅರ್ಹತಾ ಪಂದ್ಯ ಬ್ಲಾಕ್ ಪ್ಯಾಂಥರ್ಸ್ ಮತ್ತು ಡ್ರೀಮ್‌ವಲ್ಡ್ ತಂಡಗಳ ಮಧ್ಯೆ ನಡೆದು, ಬ್ಲ್ಯಾಕ್ ಪ್ಯಾಂಥರ್ಸ್ ತಂಡ ಫೈನಲ್ ಪ್ರವೇಶ ಮಾಡಿತು. ಎಲಿಮಿನೇಟರ್ ಪಂದ್ಯ ಜಿಂಗಲಕ ಮತ್ತು ಸೆವೆನ್ ಈಗಲ್ ತಂಡಗಳ ಮಧ್ಯೆ ನಡೆದು ಚಿಂಗಲಕ ತಂಡ ಮುಂದಿನ ಹಂತಕ್ಕೆ ತಲುಪಿತು. ದ್ವೀತಿಯ ಆರ್ಹತಾ ಪಂದ್ಯ ಜಿಂಗಲಕ ಮತ್ತು ಡ್ರೀಮ್ ವಲ್ಡ್ ತಂಡಗಳ ಮಧ್ಯೆ ನಡೆದು ಡ್ರೀಮ್ ವಲ್ಡ್ ತಂಡ ಫೈನಲ್ ಹಂತಕ್ಕೆ ತಲುಪಿತು.
ಪೆರುಂಬಾಡಿ ಗ್ರಾಮದ ಬ್ಲಾಕ್ ಪ್ಯಾಂಥರ್ಸ್ ಮತ್ತು ಡ್ರೀಮ್ ವಲ್ಡ್ ತಂಡಗಳ ಮಧ್ಯೆ ರೋಚಕ ಫೈನಲ್ ಪಂದ್ಯಾಟ ನಡೆಯಿತು. 23-21 ಅಂಕಗಳ ಮುನ್ನಡೆ ಸಾಧಿಸಿ ಬ್ಲಾಕ್ ಪ್ಯಾಂಥರ್ಸ್ ತಂಡ ವಿಜಯದ ಮಾಲೆಗೆ ಕೊರಲೊಡ್ಡಿತ್ತು. ಡ್ರೀಮ್‌ವಲ್ಡ್ ತಂಡ ದ್ವೀತಿಯ ಸ್ಥಾನ ಕ್ಕೆ ತೃಪ್ತಿ ಪಟ್ಟುಕೊಂಡಿತು.
ವಿಜೇತ ತಂಡಕ್ಕೆ 50 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ , ದ್ವಿತಿಯ ಸ್ಥಾನ ಪಡೆದ ತಂಡಕ್ಕೆ 30 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು. ಚೇತನ್, ಕಾರ್ತಿಕ್, ಜಾನ್ಸನ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸರಣಿ ಶ್ರೇಷ್ಠ ಪ್ರಶಸ್ತಿ ಪ್ರಜ್ವಲ್, ಉತ್ತಮ ರೈಡರ್ ದರ್ಶನ್, ಉತ್ತಮ ಡಿಫೆಂಡರ್ ಪ್ರಶಸ್ತಿ ಅಜಿಲೇಶ್ ಪಡೆದುಕೊಂಡರು. ಯೂತ್ ಫ್ರೆಂಡ್ಸ್ ಪೆರುಂಬಾಡಿ ಸಂಘದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ವಿವಿಧ ತಂಡಗಳ ಮಾಲೀಕರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net