ಮುಂದಿನ ವರ್ಷ ಉರುಸ್ ಅದ್ಧೂರಿ ಆಚರಣೆ

ಎಮ್ಮೆಮಾಡು ಸೂಫಿ ಶಾಹಿದರ ದರ್ಗಾದಲ್ಲಿ ಜಮಾಯತ್, ಶಹೀದಿಯ ಅನಾಥಾಲಯ ಅಧ್ಯಕ್ಷರು ಸಮಿತಿ ಸದಸ್ಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಎಮ್ಮೆಮಾಡು ಸೂಫಿ ಶಾಹಿದರ ದರ್ಗಾದಲ್ಲಿ ಜಮಾಯತ್, ಶಹೀದಿಯ ಅನಾಥಾಲಯ ಅಧ್ಯಕ್ಷರು ಸಮಿತಿ ಸದಸ್ಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜನಾಬ್ ಹುಸೈನ್ ಸಖಾಫಿ ಮಾಹಿತಿ
ನಾಪೋಕ್ಲು: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರುಸ್ ಮುಂದಿನ ವರ್ಷ ಏ.2 ರಿಂದ 9ವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಯತ್ ಅಧ್ಯಕ್ಷ ಜನಾಬ್ ಹುಸೈನ್ ಸಖಾಫಿ ತಿಳಿಸಿದರು.
ಶುಕ್ರವಾರ ನಮಾಜ್ ಬಳಿಕ ದಫ್ ಕಾರ್ಯಕ್ರಮದೊಂದಿಗೆ ದರ್ಗಾಕ್ಕೆ ತೆರಳಿ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಉರುಸ್ ಮಾಹಿತಿ ನೀಡಿದರು.
ಎಮ್ಮೆಮಾಡು ದರ್ಗಾದಲ್ಲಿ ಅಂತಿಮ ವಿಶ್ರಾಂತಿ ಪಡೆದಿದ್ದ ಸೂಫಿ ಶಾಹಿದರ ಹೆಸರಿನಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಉರುಸ್ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ. ಮುಂದಿನ ವರ್ಷದ ಉರುಸ್‌ಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ತಾಜುಲ್ ಇಸ್ಲಾಂ ಮುಸ್ಲಿಂ ಜಮಾಯತ್ ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಝಕರಿಯ , ಎಮ್ಮೆಮಾಡು ಖತೀಬ್ ರಾಝಿಕ್ ಫೈಝಿ, ಸೈಯ್ಯದ್ ಇಲ್ಯಾಸ್ ಸಖಾಫಿ ತಂಗಳ್, ಜಮಾಯತ್ ಸಮಿತಿ ಸದಸ್ಯರು, ಶಹೀದಿಯ ಅನಾಥಾಲಯ ಅಧ್ಯಕ್ಷರು, ಸಮಿತಿ ಸದಸ್ಯರು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net