ಮ್ಯಾರಥಾನ್‌ನಲ್ಲಿ ಮಕ್ಕಳ ಉತ್ಸಾಹ

ಸೋಮವಾರಪೇಟೆ ಜೇಸಿಐ ಸಂಸ್ಥೆಯ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ನಡೆದ ಮ್ಯಾರಥಾನ್ ಅನ್ನು ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ ಚಾಲನೆ ನೀಡಿದರು. ಜಗದಾಂಭ, ಮಾಯಾ, ವಿನುತ, ಗಿರೀಶ್ ಇದ್ದರು.
ಸೋಮವಾರಪೇಟೆ ಜೇಸಿಐ ಸಂಸ್ಥೆಯ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ನಡೆದ ಮ್ಯಾರಥಾನ್ ಅನ್ನು ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ ಚಾಲನೆ ನೀಡಿದರು. ಜಗದಾಂಭ, ಮಾಯಾ, ವಿನುತ, ಗಿರೀಶ್ ಇದ್ದರು.
Published on
ಸೋಮವಾರಪೇಟೆ: ಜೇಸಿಐ ಪುಷ್ಪಗಿರಿ ಸೋಮವಾರಪೇಟೆ ಘಟಕದ ವತಿಯಿಂದ ಭಾನುವಾರ ಬೆಳಗ್ಗೆ ಜೇಸಿ ಸಪ್ತಾಹದ ಅಂಗವಾಗಿ ಮಕ್ಕಳ ಮ್ಯಾರಥಾನ್ ಆಯೋಜಿಸಲಾಯಿತು.
ಮಕ್ಕಳಲ್ಲಿ ಶಾರೀರಿಕ ಚುರುಕುತನ, ಕ್ರೀಡಾ ಮನೋಭಾವ ಮತ್ತು ಸಾಮಾಜಿಕ ಬಾಂಧವ್ಯ ಬೆಳೆಸುವ ಉದ್ದೇಶದಿಂದ ಜೇಸಿ ವೇದಿಕೆಯಿಂದ ಮ್ಯಾರಥಾನ್ ಆಯೋಜಿಸಲಾಯಿತು. ಬೆಳಗಿನ ಚುಮುಚುಮು ವಾತಾವರಣದಲ್ಲೇ ಪುಟ್ಟ ಮಕ್ಕಳು ಓಟದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ ಮಾತನಾಡಿ, ಇಂದಿನ ಪೀಳಿಗೆಯ ಮಕ್ಕಳಲ್ಲಿ ಓದಿನೊಂದಿಗೆ ಕ್ರೀಡೆಗೆ ಒತ್ತು ನೀಡುವುದು ಅತ್ಯವಶ್ಯಕ. ಓಟ, ಆಟ ಮತ್ತು ವ್ಯಾಯಾಮದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಮ್ಯಾರಥಾನ್ ಕಾರ್ಯಕ್ರಮಗಳು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
ಜೇಸಿ ಸಂಸ್ಥೆ ಸದಾ ಸಮಾಜಮುಖಿ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು, ಜೇಸಿ ಸಪ್ತಾಹದಂತಹ ಕಾರ್ಯಕ್ರಮಗಳ ಮೂಲಕ ಯುವ ಪೀಳಿಗೆಗೆ ಉತ್ತಮ ಪ್ರೇರಣೆ ನೀಡುತ್ತಿದೆ. ಪಾಲಕರು ಮಕ್ಕಳ ಪ್ರತಿಭೆ ಗುರುತಿಸಿ ಬೆಳೆಸುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂದು ಹೇಳಿದರು.
ಮ್ಯಾರಥಾನ್‌ನಲ್ಲಿ ಎರಡು ವಿಭಾಗದಲ್ಲಿ ಬಾಲಕರು ಮತ್ತು ಬಾಲಕಿಯರು ಭಾಗವಹಿಸಿದ್ದರು. ಜೇಸಿಐ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್, ಪದಾಧಿಕಾರಿಗಳಾದ ಮಾಯಾ ಗಿರೀಶ್, ವಿನುತ ಸುದೀಪ್, ಜ್ಯೋತಿ ರಾಜೇಶ್, ರಾಜೇಶ್, ವಿನೋದ್ ಜಯರಾಮ್ ಇದ್ದರು.
ಬೆಳಗ್ಗೆ 10.30ರಿಂದ ನಿಧಾನ ಸೈಕಲ್, ಬೈಕ್ ಚಾಲನ ಸ್ಪರ್ಧೆ, ಹಿಂದಕ್ಕೆ ವಾಹನ ಚಾಲಿಸುವ ಸ್ಪರ್ಧೆ, ಪೂರ್ವಿಕ ಸಂಗೀತ ರಸಸಂಜೆ ನಡೆಯಿತು. ಸೋಮವಾರ ಮಹಿಳಾ ಸಮಾಜದಲ್ಲಿ ಮೈಸೂರು ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net