ನಿಡ್ತ ಪ್ಯಾಕ್ಸ್‌ಗೆ ಮಲ್ಲೇಶ್ ಅಧ್ಯಕ್ಷರಾಗಿ ಆಯ್ಕೆ

ನಿಡ್ತ ಪ್ಯಾಕ್ಸ್‌ನ 2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲೇಶ್ ಅವರನ್ನು ಅಭಿನಂದಿಸಲಾಯಿತು. ಮಾಜಿ ಅಧ್ಯಕ್ಷ ಧರ್ಮಪ್ಪ, ಉಪಾಧ್ಯಕ್ಷೆ ಪೂಜಾ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಇದ್ದಾರೆ.
ನಿಡ್ತ ಪ್ಯಾಕ್ಸ್‌ನ 2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲೇಶ್ ಅವರನ್ನು ಅಭಿನಂದಿಸಲಾಯಿತು. ಮಾಜಿ ಅಧ್ಯಕ್ಷ ಧರ್ಮಪ್ಪ, ಉಪಾಧ್ಯಕ್ಷೆ ಪೂಜಾ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಇದ್ದಾರೆ.
Published on
ಶನಿವಾರಸಂತೆ: ಸಮೀಪದ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 2ನೇ ಅವಧಿಗೆ ಅಧ್ಯಕ್ಷರಾಗಿ ಡಿ.ಎನ್.ಮಲ್ಲೇಶ್ ಆಯ್ಕೆಯಾದರು.
12 ಮಂದಿ ನಿರ್ದೇಶಕರನ್ನು ಒಳಗೊಂಡಿರುವ ಆಡಳಿತ ಮಂಡಳಿಯಲ್ಲಿ 2ನೇ ಅವಧಿಗೆ ಅಧ್ಯಕ್ಷರ ಆಯ್ಕೆಗಾಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮಲ್ಲೇಶ್ ಅವರಿಗೆ 7 ಮತಗಳು ಲಭಿಸಿದ್ದರೆ ಇವರ ವಿರುದ್ಧ ಸ್ಪರ್ಧಿಸಿದ್ದ ನಿರ್ದೇಶಕ ಎಸ್.ಎಂ.ಉಮಾಶಂಕರ್‌ಗೆ 5 ಮತಗಳು ಲಭಿಸಿತು. ಮಡಿಕೇರಿ ಸಹಕಾರ ಇಲಾಖೆಯ ಅಧೀಕ್ಷಕಿ ಪಿ.ಆಶಾ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಉಪಾಧ್ಯಕ್ಷೆ ಪೂಜಾ ವಿಜಯ್, ಆಡಳಿತ ಮಂಡಳಿಯ ನಿರ್ದೇಶಕರು, ಸಿಇಒ ಹೂವಣ್ಣ, ಸಿಬ್ಬಂದಿ ಎಚ್.ಆರ್.ಧರಣಿ, ಕೃಪಾ, ಪ್ರದೀಪ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net