ಒಳ್ಳೆಯತನದಲ್ಲಿ ಬದುಕು ಕಟ್ಟಿಕೊಳ್ಳಿ

ಬುಟ್ಟಂಗಾಲದ ಕೊಡಗು ಹೆಗ್ಗಡೆ ಸಮಾಜದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 18ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮವನ್ನು ಹೆಗ್ಗಡೆ ಸಮಾಜದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಉದ್ಘಾಟಿಸಿದರು. ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಪಡಿಞರಂಡ ಜಿ. ಅಯ್ಯಪ್ಪ, ಪಡಿಞರಂಡ ದೇವಕಿ ಅಚ್ಚಪ್ಪ, ರಾಧ ಕುಟ್ಟಪ್ಪ, ನಾಪಂಡ ಗಣೇಶ ಮತ್ತಿತರರು ಇದ್ದರು.
ಬುಟ್ಟಂಗಾಲದ ಕೊಡಗು ಹೆಗ್ಗಡೆ ಸಮಾಜದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 18ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮವನ್ನು ಹೆಗ್ಗಡೆ ಸಮಾಜದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಉದ್ಘಾಟಿಸಿದರು. ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಪಡಿಞರಂಡ ಜಿ. ಅಯ್ಯಪ್ಪ, ಪಡಿಞರಂಡ ದೇವಕಿ ಅಚ್ಚಪ್ಪ, ರಾಧ ಕುಟ್ಟಪ್ಪ, ನಾಪಂಡ ಗಣೇಶ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಸಲಹೆ
  • 8ನೇ ಕೊಡವ ಪುಸ್ತಕ ಪತ್ತಾಯ ಅನಾವರಣ

ವಿರಾಜಪೇಟೆ:

ಇಂದಿನ ಕಾಲದಲ್ಲಿ ಜನರು ಒಳ್ಳೆಯತನಕ್ಕೆ ಒಲವು ತೋರಿಸುತ್ತಾರೆಯೇ ಹೊರತು ದೊಡ್ಡಸ್ತಿಕೆಗಲ್ಲ. ದೊಡ್ಡತನ ಮೆರೆಯುವವರನ್ನು ಸಮಾಜ ಇಷ್ಟಪಡುವುದಿಲ್ಲವಾದ್ದರಿಂದ, ದೊಡ್ಡತನ ಬಿಟ್ಟು ಒಳ್ಳೆಯತನದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು.

ಬುಟ್ಟಂಗಾಲದ ಕೊಡಗು ಹೆಗ್ಗಡೆ ಸಮಾಜದಲ್ಲಿ ಗುರುವಾರ ಆಯೋಜಿಸಿದ್ದ ಅಕಾಡೆಮಿಯ 18ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮುದಾಯದ ಸಂಸ್ಕೃತಿ, ಆಚಾರ-ವಿಚಾರ ಮತ್ತು ಸಂಪ್ರದಾಯಗಳನ್ನು ಬರಿ ಪಾಠ ಪುಸ್ತಕಗಳಿಂದ ಕಲಿಯಲು ಸಾಧ್ಯವಿಲ್ಲ. ದೊಡ್ಡಸ್ತಿಕೆಯಿಂದ ನಮ್ಮ ಮೂಲ ಪದ್ಧತಿಗಳನ್ನು ಕಡೆಗಣಿಸುವುದು ಸರಿಯಲ್ಲ. ಕೊಡವ ಸಂಸ್ಕೃತಿಯನ್ನು ಸಮಾಜ, ದೇವನೆಲೆ ಹಾಗೂ ವಿದ್ಯಾಸಂಸ್ಥೆಗಳ ಮೂಲಕ ಮಕ್ಕಳಿಗೆ ಮತ್ತು ಹಿರಿಯರಿಗೆ ತಲುಪಿಸುವ ಉದ್ದೇಶದಿಂದ ಈ ಪುಸ್ತಕ ಪತ್ತಾಯ ಸ್ಥಾಪಿಸಲಾಗುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹೆಗ್ಗಡೆ ಸಮಾಜದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಮಾತನಾಡಿ, ನಡಿಕೇರಿಯಂಡ ಚಿಣ್ಣಪ್ಪ, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಹಾಗೂ ಐ.ಮಾ. ಮುತ್ತಣ್ಣ ಅವರಂತಹ ಮಹನೀಯರ ಸಾಹಿತ್ಯಿಕ ಕೊಡುಗೆಯಿಂದಾಗಿ ಇಂದು ಕೊಡವ ಸಾಹಿತ್ಯ ಅಗಾಧವಾಗಿ ಬೆಳೆದಿದೆ. ಅಕಾಡೆಮಿಯ ಕಾರ್ಯಕ್ರಮಗಳು ಕೊಡವಾಮೆಯ ಬೆಳವಣಿಗೆಗೆ ಪೂರಕವಾಗಿವೆ ಎಂದು ಹೇಳಿದರು.
ಪುಸ್ತಕ ಪತ್ತಾಯ ಅನಾವರಣಗೊಳಿಸಿದ ಹೆಗ್ಗಡೆ ಸಮಾಜದ ಮಾಜಿ ಅಧ್ಯಕ್ಷ ಪಡಿಞರಂಡ ಜಿ. ಅಯ್ಯಪ್ಪ ಮಾತನಾಡಿ, ಸಮಾಜಗಳಲ್ಲಿ ಜ್ಞಾನ ಭಂಡಾರ ಸ್ಥಾಪಿಸುತ್ತಿರುವುದು ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು. ಹಿರಿಯರಾದ ಪಡಿಞರಂಡ ದೇವಕಿ ಅಚ್ಚಪ್ಪ ಮಾತನಾಡಿ, ಇತಿಹಾಸ, ಜಾನಪದ ಹಾಗೂ ಕಲೆಯನ್ನು ಅರಿಯಲು ಪುಸ್ತಕ ಪತ್ತಾಯ ಅನುಕೂಲಕರವಾಗಿದ್ದು, ಪ್ರತಿಯೊಬ್ಬರೂ ಅಕಾಡೆಮಿಯ ಕಾರ್ಯಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಪಾನಿಕುಟ್ಟಿರ ರಾಧ ಕುಟ್ಟಪ್ಪ, ನಾಪಂಡ ಗಣೇಶ, ಚೆಪ್ಪುಡಿರ ಉತ್ತಪ್ಪ, ಕಂಬೆಯಂಡ ಡೀನ ಬೋಜಣ್ಣ, ನಾಯಂದಿರ ಆರ್. ಶಿವಾಜಿ, ಪೊನ್ನಿರ ಗಗನ್, ಪಡಿಞರಂಡ ಪ್ರಭುಕುಮಾರ್, ಪೌಡಂಡ ಡೇಸಿ ಮತ್ತಿತರರು ಇದ್ದರು
ಕಾರ್ಯಕ್ರಮದಲ್ಲಿ ಕುಂಬೆರ, ಪಂದಿಕಂಡ ಕುಟುಂಬಸ್ಥರಿಗೆ ಹಾಗೂ ಪಾರಾಣೆಯ ಬಲ್ಯಾಂಡೆ ಮಂದ್ ಸಮಿತಿಗೆ ದುಡಿಗಳನ್ನು ವಿತರಿಸಲಾಯಿತು. ಬಲ್ಯಾಂಡೆ ಮಂದ್ ಸಮಿತಿಯಿಂದ ಬಾಳೋಪಾಟ್ ಹಾಗೂ ಹೆಗ್ಗಡೆ ಸಮಾಜ ಪೊಮ್ಮಕ್ಕಡ ಕೂಟದಿಂದ ಉಮ್ಮತಾಟ್ ಪ್ರದರ್ಶನ ನಡೆಯಿತು.
ಇದೇ ಸಂದರ್ಭದಲ್ಲಿ ಹೆಗ್ಗಡೆ ಸಮಾಜಕ್ಕೆ ಅಕಾಡೆಮಿ ನೋಂದಣಿ ಪತ್ರ ನೀಡಿದರೆ, ಹೆಗ್ಗಡೆ ಸಮಾಜದ ವತಿಯಿಂದ ಅಕಾಡೆಮಿಗೆ 10 ಸಾವಿರ ರೂ. ಚೆಕ್ ಹಸ್ತಾಂತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net