ಕಾಫಿ ತೋಟದ ಕಾರ್ಮಿಕನ ಹತ್ಯೆ

ಹೆಮ್ಮನೆ ಗ್ರಾಮ ವ್ಯಾಪ್ತಿಯ ಕೆಂಕೆರೆ ಕಾಫಿ ತೋಟದಲ್ಲಿ ಪತ್ತೆಯಾದ ಪುನೀತ್ (33) ಮೃತದೇಹ.
ಹೆಮ್ಮನೆ ಗ್ರಾಮ ವ್ಯಾಪ್ತಿಯ ಕೆಂಕೆರೆ ಕಾಫಿ ತೋಟದಲ್ಲಿ ಪತ್ತೆಯಾದ ಪುನೀತ್ (33) ಮೃತದೇಹ.
Published on
ಶನಿವಾರಸಂತೆ: ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಹತ್ಯೆಗೈದಿದ್ದು, ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸಕಲೇಶಪುರ ತಾಲೂಕಿನ ಬಾಳೆಕೆರೆ ಗ್ರಾಮದ ಪುನೀತ್(33) ಹತ್ಯೆಯಾದವರು. ಪುನೀತ್ ಪತ್ನಿ ರತ್ನಾ, ಹೆಮ್ಮನೆ ಗ್ರಾಮದ ಪ್ರವೀಣ್ ಹಾಗೂ ಪ್ರವೀಣ್ ತಾಯಿ ಪಾರ್ವತಮ್ಮ ಬಂಧಿತರು. ಪುನೀತ್ ಹಲವು ವರ್ಷಗಳಿಂದ ಹೆಮ್ಮನೆ ವ್ಯಾಪ್ತಿಯ ಕೆಂಕೆರೆ ಗ್ರಾಮದಲ್ಲಿ ವಾಸವಿದ್ದು, ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಮಾ.29ರಂದು ಪುನೀತ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳವಾರ ಸಂಜೆ ಪುನೀತ್ ಮೃತದೇಹ ಹೆಮ್ಮನೆ ಸಮೀಪದ ಕಾಫಿತೋಟದಲ್ಲಿ ಪತ್ತೆಯಾಗಿತ್ತು. ಕೊಲೆ ಆರೋಪದ ಹಿನ್ನೆಲೆಯಲ್ಲಿ ಪುನೀತ್ ಪತ್ನಿ ರತ್ನಾ, ಪ್ರವೀಣ್ ಹಾಗೂ ಪಾರ್ವತಮ್ಮ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಸೋಮವಾರಪೇಟೆ ಡಿಎಸ್‌ಪಿ ಚಂದ್ರಶೇಖರ್, ಶನಿವಾರಸಂತೆ ವೃತ್ತ ನಿರೀಕ್ಷಕ ಕೃಷ್ಣ ರಾಜ್, ಶನಿವಾರಸಂತೆ ಪಿಎಸ್‌ಐ ಗೋವಿಂದ್‌ರಾಜ್ ಹಾಗೂ ಚಂದ್ರು ಭೇಟಿ ನೀಡಿ ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net