ಯುವ ಸಮೂಹ ದುಶ್ಚಟಗಳ ವಿರುದ್ಧ ಹೋರಾಡಲಿ

 ಸುಂಟಿಕೊಪ್ಪ  ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಂತ್‌ಕಮಾರ್ ಮಾತನಾಡಿದರು.
ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಂತ್‌ಕಮಾರ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಎಎಸ್‌ಐ ಅನಂತ್‌ಕಮಾರ್ ಹೇಳಿಕೆ

ಸುಂಟಿಕೊಪ್ಪ :

ಯುವಜನತೆ ದುಶ್ಚಟಗಳ ದಾಸರಾಗದೆ ಅವುಗಳ ವಿರುದ್ಧ ಹೋರಾಟ ನಡೆಸಿದಾಗ ಮಾತ್ರ ಅವುಗಳ ನಿರ್ಮೂಲನೆ ಸಾಧ್ಯ ಎಂದು ಇಲ್ಲಿನ ಪೊಲೀಸ್ ಠಾಣೆಯ ಎಎಸ್‌ಐ ಅನಂತ್‌ಕಮಾರ್ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್, ಸುಂಟಿಕೊಪ್ಪ ವಲಯ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆ ಮತ್ತು ಬಳಕೆಯಿಂದ ಅನಾಹುತ ಸಂಭವಿಸುತ್ತದೆ. ಆದ್ದರಿಂದ ಯುವಜನತೆ ಅದರ ದಾಸತ್ವಕ್ಕೆ ತುತ್ತಾಗಬಾರದು. ಅಲ್ಲದೆ ಮಕ್ಕಳು ಅಪರಿಚಿತರು ನೀಡುವ ವಸ್ತುಗಳನ್ನ ಸ್ವೀಕರಿಸಬಾರದು, ಸೇವಿಸಬಾರದು. ಡ್ರಗ್ಸ್ ಸೇವಿಸುವುದು ಅಥವಾ ಮಾರಾಟ ಮಾಡುವುದು ಕಂಡು ಬಂದಲ್ಲಿ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಮದ್ಯಪಾನ, ಧೂಮಪಾನ, ಮಾದಕ ವಸ್ತು ಗಳ ಸೇವನೆ ಕುಟುಂಬ ವರ್ಗವನ್ನು ಸಂಕಷ್ಟಕ್ಕೆ ದೂಡುತ್ತದೆ ಎಂದರು.
ಮಡಿಕೇರಿ ತಾಲೂಕು ಯೋಜನಾಧಿಕಾರಿ ಯು.ಪುರುಷೋತ್ತಮ್ ಮಾತನಾಡಿ, ವಿದ್ಯಾರ್ಥಿಗಳ ಸ್ವಸ್ಥ ಜೀವನಕ್ಕಾಗಿ ಸ್ವಾಸ್ಥ್ಯ ಸಂಕಲ್ಪ ಎನ್ನುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಡಿ.ನರಸಿಂಹ ಮಾತನಾಡಿ, ಮಕ್ಕಳು ಒಳ್ಳೆಯ ವಿದ್ಯೆ ಕಲಿತು ಪಾಲಕರಿಗೆ ಉತ್ತಮ ಹೆಸರು ತಂದುಕೊಡಬೇಕು ಎಂದು ತಿಳಿಸಿದರು.
ಪ್ರಭಾರ ಮುಖ್ಯ ಶಿಕ್ಷಕಿ ಚಿತ್ರಾ, ಪೋಲಿಸ್ ಸಿಬ್ಬಂದಿ ರಮೇಶ್, ಉಕ್ಕಡದ ಕಾರ್ಯದರ್ಶಿ ಸರಸ್ವತಿ, ವಲಯ ಮೇಲ್ವಿಚಾರಕ ಸಂತೋಷ್ ನಾಯ್ಕ, ಸೇವಾ ಪ್ರತಿನಿಧಿಗಳಾದ ಚಿತ್ರಾ, ಯಶೋದಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net