ಮಕ್ಕಳು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಲಿ

 ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
Published on
ಗೋಣಿಕೊಪ್ಪ: ಮಕ್ಕಳು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳುವುದರಿಂದ ಸಾಧನೆಯ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದು ನವದೆಹಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರೊ.ಡಾ.ಎಂ.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ವಿರಾಜಪೇಟೆ ಪ್ರಗತಿ ಫೌಂಡೇಷನ್, ಲೀಫ್ ಸಂಸ್ಥೆ ಸಹಯೋಗದಲ್ಲಿ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು. ಕುತೂಹಲದಿಂದ ತೊಡಗಿಕೊಂಡಾಗ ಸಾಕಷ್ಟು ಕೌತುಕಗಳು ಕಣ್ಣೆದುರು ಕಾಣುವಂತಾಗುತ್ತದೆ. ಇಂದ್ರಿಯಗಳು ಕೂಡ ಸಾಕಷ್ಟು ಸಂಶೋಧನೆಗೆ ಸ್ಪಂದಿಸುತ್ತದೆ. ಇಂತಹ ಗುಣ ಬದುಕಿಗೆ ಅವಶ್ಯ. ರಾಷ್ಟ್ರಪತಿಯಾಗಿದ್ದ ಡಾ.ಅಬ್ದುಲ್ ಕಲಾಂ ಕೂಡ ಬಾಲ್ಯದಲ್ಲಿ ಕೌತುಕದ ಕಡೆ ಮನಸು ವಾಲುವಂತೆ ರೂಢಿಸಿಕೊಂಡಿದ್ದರು. ಹಾಗಾಗಿ ವಿಜ್ಞಾನಿಯಾಗಿ ದೇಶದ ಆಸ್ತಿಯಾದರು. ಇದೇ ರೀತಿ ಚಿಕ್ಕ ವಯಸ್ಸಿನಲ್ಲಿ ವಿಮರ್ಶೆ, ಸಂಶೋಧನೆಯತ್ತ ಹೆಚ್ಚು ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೀಳರಿಮೆ, ಹಿಂಜರಿಕೆಯಿಂದ ಮಕ್ಕಳ ಪ್ರತಿಭೆ ಕಮರಿ ಹೋಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಸರ್ಕಾರಿ ಶಾಲೆ ವಿದ್ಯಾರ್ಥಿ ಎಂಬ ಕೀಳರಿಮೆ ಬಿಟ್ಟು ಪ್ರತಿಭೆ ಅನಾವರಣಕ್ಕೆ ಮುಂದಾಗಬೇಕು. ಹೃದಯದಿಂದ ಕಲಿತ ಶಿಕ್ಷಣ ಬದುಕು ರೂಪಿಸುತ್ತದೆ. ಶಿಕ್ಷಣ ಒಂದು ತಪಸ್ಸು ಎಂಬ ನಿರ್ಧಾರ ಅವಶ್ಯ ಎಂದರು.
ಲೀಫ್ ಸಂಸ್ಥೆ ಮುಖ್ಯಸ್ಥ ಕರ್ಣನ್ ರಾಘವೇಂಧ್ರ ನವೀನ್ ಮಾತನಾಡಿ, ಬದುಕಿಗೆ ಗಣಿತ, ವಿಜ್ಞಾನ ಮತ್ತು ಭಾಷಾ ಜ್ಞಾನ ಮುಖ್ಯ. ಗಣಿತ ಇಲ್ಲದೆ ಬದುಕು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ನಿತ್ಯದ ಬದುಕಿಗೆ ಗಣಿತ ಅವಶ್ಯವಾಗಿದೆ. ಇದಕ್ಕೆ ಶಿಕ್ಷಣವೇ ಮುಖ್ಯವಾಗುವುದಿಲ್ಲ. ಬದುಕಿಗೆ ಬೇಕಾದ ಗಣಿತವನ್ನು ಅನುಭವದಿಂದಲೂ ಪಡೆದುಕೊಳ್ಳಬಹುದು ಎಂದರು.
ದೇವಾಂಶ್ ಅಕಾಡೆಮಿ ಮತ್ತು ಲೀಫ್ ಸಂಸ್ಥೆ ಸುಲಭವಾದ ಲೆಕ್ಕ, ಕೌತುಕದ ವಿಜ್ಞಾನ, ರಾಮಾನುಜಂ ಕುರಿತು ಹೊರ ತಂದಿರುವ ಪುಸ್ತಕವನ್ನು ಶಾಲೆಗೆ ಕೊಡುಗೆ ನೀಡಲಾಯಿತು. ವಿರಾಜಪೇಟೆ ಪ್ರಗತಿ ಫೌಂಡೇಷನ್ ಮುಖ್ಯಸ್ಥ ಮಾದಂಡ ತಿಮ್ಮಯ್ಯ, ಉಪ ಪ್ರಾಂಶುಪಾಲ ಚಂಗಪ್ಪ ಮಾತನಾಡಿದರು. ಶಿಕ್ಷಕಿ ನಳಿನಿ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net