ಮೂರ್ನಾಡು ಮಹಿಳಾ ಒಕ್ಕೂಟದಿಂದ ಕೆಡ್ಡಸ ಆಚರಣೆ

ಮೂರ್ನಾಡು ಗೌಡ ಸಮಾಜದ ಆವರಣದಲ್ಲಿ ಆಯೋಜಿಸಿದ ಕೆಡ್ಡಸ ಹಬ್ಬ ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟದ ಮಹಿಳೆಯರು ಭೂಮಿ ತಾಯಿಗೆ ಪೂಜೆ ಸಲ್ಲಿಸಿದರು.
ಮೂರ್ನಾಡು ಗೌಡ ಸಮಾಜದ ಆವರಣದಲ್ಲಿ ಆಯೋಜಿಸಿದ ಕೆಡ್ಡಸ ಹಬ್ಬ ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟದ ಮಹಿಳೆಯರು ಭೂಮಿ ತಾಯಿಗೆ ಪೂಜೆ ಸಲ್ಲಿಸಿದರು.
Published on
ನಾಪೋಕ್ಲು: ಇಲ್ಲಿಗೆ ಸಮೀಪದ ಮೂರ್ನಾಡು ಗೌಡ ಸಮಾಜದಲ್ಲಿ ಮುರ್ನಾಡು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಕೆಡ್ಡಸ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಮೂರ್ನಾಡು ಗೌಡ ಸಮಾಜದ ಆವರಣದಲ್ಲಿ ಆಯೋಜಿಸಿದ ಕೆಡ್ಡಸ ಕಾರ್ಯಕ್ರಮದಲ್ಲಿ ಒಕ್ಕೂಟದ ಮಹಿಳೆಯರು ಭೂಮಿತಾಯಿಗೆ ಪೂಜೆ ಸಲ್ಲಿಸಿದರು. ಭೂಮಾತೆಗೆ ಕೃತಜ್ಞತೆ ಸಲ್ಲಿಸುವ ಈ ಹಬ್ಬವು ಕೃಷಿ ಸಂಸ್ಕೃತಿಯ ಪ್ರತೀಕವಾಗಿ ಸಂಪ್ರದಾಯದ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಲಾಯಿತು. ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಿದ್ದರು.
ಈ ಹಬ್ಬವು ಕುಟುಂಬ ಒಗ್ಗಟ್ಟನ್ನು ಬಲಪಡಿಸುವುದರೊಂದಿಗೆ ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗೆ ಸಹಕಾರಿಯಾಗಿದೆ. ಯುವಪೀಳಿಗೆಗೆ ತಮ್ಮ ಸಂಪ್ರದಾಯಗಳ ಮಹತ್ವವನ್ನು ತಿಳಿಸುವ ಮಹತ್ವದ ಹಬ್ಬವಾಗಿದೆ. ಹಬ್ಬವು ಗೌಡ ಜನಾಂಗದ ಸಂಸ್ಕೃತಿ, ನಂಬಿಕೆ ಮತ್ತು ಜೀವನ ಶೈಲಿಯ ಪ್ರತಿಬಿಂಬವಾಗಿದೆ. ಇದು ಕೇವಲ ಒಂದು ಹಬ್ಬವಲ್ಲ. ಅದು ಪ್ರಕೃತಿ ಆರಾಧನೆ. ಕುಟುಂಬ ಏಕತೆ ಮತ್ತು ಸಾಮಾಜಿಕ ಒಗ್ಗಟ್ಟಿನ ಸಂಕೇತವಾಗಿದೆ. ಭೂಮಿಯನ್ನು ಗೌರವಿಸುವುದು ಮತ್ತು ಪರಿಸರವನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂಬ ಸಂದೇಶವನ್ನು ಹಬ್ಬ ಸಾರುತ್ತದೆ.
ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಲ್ಲುಮುಟ್ಲು ಜಶ್ಮಿ, ಉಪಾಧ್ಯಕ್ಷೆ ಬೈಲೋಳ್ಳಿ ಮೇನಕಾ, ಕಾರ್ಯದರ್ಶಿ ತೆಕ್ಕಡೆ ಭವ್ಯಾ, ಖಜಾಂಚಿಯಾದ ತೆಕ್ಕಡೆ ಆಶಾ, ಸದಸ್ಯರಾದ ಕಲ್ಲುಮುಟ್ಲು ಲತಾ, ಜಯಮಾಲಾ, ಉಳುವಾರನ ಕುಮುದಿನಿ, ಕುವೇಂದ್ರಾ ಸುನಂದಿನಿ, ಚೆರಿಯಮನೆ ಸಾವಿತ್ರಿ, ಪಾಡಿಚೆಟ್ಟಿರ ಹರ್ಷಿತಾ, ಮೆರ್ಕಜ್ಜೆ, ಸುಷ್ಮಾ, ಕೃತಿಕಾ, ತೆಕ್ಕಡೆ ಪೂರ್ಣಿಮಾ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net