ವಿರಾಜಪೇಟೆ ತಾಲೂಕು ತಹಸೀಲ್ದಾರ್ ಪ್ರವೀಣ್ ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿದರು. ವಿರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್, ಹೆಗ್ಗಡೆ ಸಮಾಜದ ವತಿಯಿಂದ ಹಿರಿಯರಾದ ಪಡಿಞರಂಡ ಅಯ್ಯಪ್ಪ , ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಪೌಲ್ ಕ್ಷೇವಿಯರ್ ಮತ್ತು ಪುಟ್ಟಿಚಂಡ ನರೇಶ್, ಹಿಂದೂ ಜಾಗರಣ ವೇದಿಕೆಯ ತಾಲೂಕು ಘಟಕದ ಪ್ರಮುಖರು ಜೈ ಭಾರತ್ ಅಕಾಡೆಮಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ವಿರಾಜಪೇಟೆ ಆಟೋ ಚಾಲಕರ ಸಂಘ, ಪುರಸಭೆಯ ಮುಖ್ಯಧಿಕಾರಿ ನಾಚಪ್ಪ ಮತ್ತಿತರರು ವೀರ ಯೋಧರಿಗೆ ನಮನ ಸಲ್ಲಿಸಿದರು.