ಕನ್ನಂಬಾಡಿ ಅಮ್ಮ ದೇವಿ ಮೂರ್ತಿ ಮರು ಪ್ರತಿಷ್ಠಾಪನೆ

ಗ್ರಾಮದ ಹಿರಿಯರಾದ ವಿಮಲಾ ವೀರಪ್ಪ ನೂತನ ದ್ವಾರವನ್ನು ಉದ್ಘಾಟಿಸಿದರು. ಎಂ.ಎಚ್.ಅಣ್ಣೇಗೌಡ, ಎಂ.ಆರ್.ನಂಜುಂಡ, ಆರ್.ಪ್ರವೀಣ್, ಶಂಕರ ಶೆಟ್ಟಿ ಇತರರಿದ್ದರು.
ಗ್ರಾಮದ ಹಿರಿಯರಾದ ವಿಮಲಾ ವೀರಪ್ಪ ನೂತನ ದ್ವಾರವನ್ನು ಉದ್ಘಾಟಿಸಿದರು. ಎಂ.ಎಚ್.ಅಣ್ಣೇಗೌಡ, ಎಂ.ಆರ್.ನಂಜುಂಡ, ಆರ್.ಪ್ರವೀಣ್, ಶಂಕರ ಶೆಟ್ಟಿ ಇತರರಿದ್ದರು.
Published on
ಕುಶಾಲನಗರ: ಸಮೀಪದ ಮುಳ್ಳುಸೋಗೆ ಗ್ರಾಮದ ಶ್ರೀ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ಮೂರ್ತಿ ಮರು ಪ್ರತಿಷ್ಠಾಪನಾ ಕಾರ್ಯಕ್ರಮ ಬುಧವಾರ ವಿಧ್ಯುಕ್ತವಾಗಿ ಆರಂಭಗೊಂಡಿತು.
ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ವಿವಿಧ ಪೂಜೆ, ಹೋಮ, ಹವನ ನಡೆದವು. ಬುಧವಾರ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಶುದ್ಧಿ, ಮಹಾ ಸಂಕಲ್ಪ, ವಾಸ್ತು ರಕ್ಷಾ ಹೋಮ, ಪ್ರಸಾದ ಶುದ್ಧಿ, ವಾಸ್ತು ಬಲಿ, ಬಿಂಬ ಪ್ರಸಾದ ಸಂಗ್ರಹ ನಂತರ ಮುಖ್ಯದ್ವಾರಕ್ಕೆ ಪೂಜೆ ಸಲ್ಲಿಸಿದ ಬಳಿಕ ಉದ್ಘಾಟಿಸಲಾಯಿತು. ಗ್ರಾಮದ ಹಿರಿಯರಾದ ವಿಮಲಾ ವೀರಪ್ಪ ನೂತನ ದ್ವಾರವನ್ನು ಉದ್ಘಾಟಿಸಿದರು.
ಗುರುವಾರ ಮಹಾ ಗಣಪತಿ ಹೋಮ, ಸಂಸ್ಕಾರ ಹೋಮ, ನೂತನ ಬಿಂಬಕ್ಕೆ ಸಂಸ್ಕಾರ, ಬಿಂಬ ಶುದ್ಧಿ, ಕಲಶ ನವೀಕರಣ, ಪ್ರಾಯಶ್ಚಿತ್ತ ಹೋಮ, ಕಲಾಹೋಮ, ಜರುಗಿದವು. ಸಮಸ್ತ ಪೂಜಾ ವಿಧಿಗಳು ಅರ್ಚಕ ರಾಮಚಂದ್ರ ಭಟ್ ಮತ್ತು ತಂಡದಿಂದ ನಡೆದವು. ಮುಳ್ಳುಸೋಗೆ ಸೇರಿದಂತೆ ಸುತ್ತಲ ಗ್ರಾಮಗಳ ಜನರು ಪಾಲ್ಗೊಂಡಿದ್ದರು.
ಶುಕ್ರವಾರ ಕಾವೇರಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ಕಲಶ ಮೆರವಣಿಗೆ, ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಮಹಾ ಮಂಗಳಾರತಿ ನಡೆಯಲಿದೆ. ಆದಿಚುಂಚನಗಿರಿ ಮಠದ ಹಾಸನ-ಕೊಡಗು ಶಾಖೆಯ ಶ್ರೀ ಶಂಭುನಾಥ ಸ್ವಾಮೀಜಿ, ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ವಿರಾಜಪೇಟೆಯ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಕನ್ನಂಬಾಡಿ ಅಮ್ಮನವರ ಮತ್ತು ಮಾರಮ್ಮ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಂ.ಎಚ್.ಅಣ್ಣೇಗೌಡ, ಉಪಾಧ್ಯಕ್ಷ ಎಂ.ಆರ್.ನಂಜುಂಡ, ಕಾರ್ಯದರ್ಶಿ ಆರ್.ಪ್ರವೀಣ್, ಖಜಾಂಚಿ ಎಂ.ವಿ.ದಾಸೇಗೌಡ, ನಿರ್ದೇಶಕರಾದ ಎಂ.ಟಿ.ರಘು, ಎಂ.ಆರ್.ಮಹದೇವಪ್ಪ , ಎಂ.ಸಿ.ಸಂತೋಷ್, ಎಂ.ಪಳನಿ ಸ್ವಾಮಿ, ಎಂ.ಬಿ.ಸುರೇಶ್ ಕುಮಾರ್, ಎಂ.ಎಚ್.ಚಂದ್ರಪ್ಪ, ಎಂ.ಎಸ್.ಪ್ರಸನ್ನ, ಎಂ.ಜಿ.ಅಜಿತ್ ಕುಮಾರ್, ಎಂ.ದಿನೇಶ್, ಡಿ.ಟಿ.ರಂಗಸ್ವಾಮಿ, ಎಂ.ಕೆ.ಚಂದ್ರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net