ಮೇಕೇರಿರ, ಕುಲ್ಲೇಟಿರ ತಂಡಗಳಿಗೆ ಭರ್ಜರಿ ಜಯ

ನಾಪೋಕ್ಲುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ  ಚೇನಂಡ  ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಶುಕ್ರವಾರದ ಪಂದ್ಯ.
ನಾಪೋಕ್ಲುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಶುಕ್ರವಾರದ ಪಂದ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಕೊಡವ ಕೌಟುಂಬಿಕ ಹಾಕಿ ಉತ್ಸವ
ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಚೇನಂಡ ಹಾಕಿ ಟೂರ್ನಿಯ ಶುಕ್ರವಾರದ ಪಂದ್ಯಗಳಲ್ಲಿ ಮೇಕೇರಿರ ಹಾಗೂ ಕುಲ್ಲೇಟಿರ ಎರಡು ತಂಡಗಳು ಭರ್ಜರಿ ಜಯ ಗಳಿಸಿದವು.
ಮೇಕೇರಿರ ತಂಡವು ಕಾಡ್ಯಮಾಡ ವಿರುದ್ಧ 5-0 ಅಂತರದಿಂದ ಹಾಗೂ ಚೇನಂಡ ವಿರುದ್ಧ ಕುಲ್ಲೇಟಿರ 5-0 ಅಂತರದಿಂದ ಜಯಗಳಿಸಿದವು. ಪರದಂಡ ಮತ್ತು ಐಚೆಟ್ಟಿರ ತಂಡಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು.
ಪಂದ್ಯದಲ್ಲಿ ಎರಡೂ ತಂಡಗಳು ಒಂದೊಂದು ಗೋಲು ಗಳಿಸಿದವು. ಬಳಿಕ ಗೆಲುವಿಗಾಗಿ ಟೈಬ್ರೇಕರ್ ಮೊರೆ ಹೋಗಬೇಕಾಯಿತು. ಟೈ ಬ್ರೇಕರ್‌ನಲ್ಲಿ ಪರದಂಡ ಐಚೆಟ್ಟಿರ ವಿರುದ್ಧ 5-4 ಅಂತರದಿಂದ ಜಯಗಳಿಸಿತು.
ಇಟ್ಟಿರ ಮತ್ತು ಮೇರಿಯಂಡ ತಂಡಗಳ ನಡುವೆಯೂ ಸಮಬಲದ ಹೋರಾಟ ನಡೆಯಿತು. ಎರಡೂ ತಂಡಗಳು 2-2 ಗೋಲುಗಳಿಸಿದವು. ಬಳಿಕ ಟೈ ಬ್ರೇಕರ್ ನಲ್ಲಿ ಇಟ್ಟಿರ ಮೇರಿಯಂಡ ವಿರುದ್ಧ 2-1ರಿಂದ ಜಯ ಸಾಧಿಸಿತು.
ಉಳಿದಂತೆ ಬೊಳ್ಳೆ ಪಂಡ ವಿರುದ್ಧ ಮಚ್ಚಾರಂಡ 3-2ರಿಂದ, ಕಾಂಡಂಡ ವಿರುದ್ಧ ಪಳಂಗಂಡ 1-0ಯಿಂದ, ಮುರುವಂಡ ವಿರುದ್ಧ ಪೆಮ್ಮಂಡ 1-0ಯಿಂದ, ಕೊಂಗಂಡ ವಿರುದ್ಧ ಚೇಂದೀರ 2-1ರಿಂದ ,ಬೊವ್ವೇರಿಯಂಡ ವಿರುದ್ಧ ಸಣ್ಣುವಂಡ 3-1 ರಿಂದ, ಪಟ್ಟಚೆರವಂಡ ವಿರುದ್ಧ ಮಂಡೆಪಂಡ 4- 0 ಅಂತರದಿಂದ ಜಯಗಳಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net