ನಾಳೆ ಹಿಂದೂ ಸಂಗಮ ಕಾರ್ಯಕ್ರಮ

ಹಿಂದೂ ಸಂಗಮ ಕಾರ್ಯಕ್ರಮ ನಿಮಿತ್ತ ಸಿಂಗಾರಗೊಂಡ ಪೊನ್ನಂಪೇಟೆ ಪಟ್ಟಣ.
ಹಿಂದೂ ಸಂಗಮ ಕಾರ್ಯಕ್ರಮ ನಿಮಿತ್ತ ಸಿಂಗಾರಗೊಂಡ ಪೊನ್ನಂಪೇಟೆ ಪಟ್ಟಣ.
Published on
ಪೊನ್ನಂಪೇಟೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಆಚರಣೆ ಸಂಬಂಧ ಪೊನ್ನಂಪೇಟೆಯಲ್ಲಿ ಫೆ. 8ರಂದು ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಪೂರ್ವ ತಯಾರಿ ಭರದಿಂದ ಸಾಗಿದೆ.
ಭಾನುವಾರ ಮಧ್ಯಾಹ್ನ 3 ಗಂಟೆಗೆ ಪೊನ್ನಂಪೇಟೆ ಮಹಿಳಾ ಸಮಾಜದಿಂದ ಬೃಹತ್ ಶೋಭಾಯಾತ್ರೆ ಹೊರಟು ಶ್ರೀ ಬಸವೇಶ್ವರ ದೇವಸ್ಥಾನದ ಮುಂಭಾಗದಿಂದ ಸಾಗಿ ಕೊಡವ ಸಮಾಜದ ಪಕ್ಕದಲ್ಲಿ ಇರುವ ಶಾಲಾ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ.
ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಸ್ವಾಮಿ ಪರಹಿತಾನಂದ ಮಹಾರಾಜ್, ಪೊನ್ನಂಪೇಟೆ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚಿರಿಯಪಂಡ ಉಮೇಶ್ ಉತ್ತಪ್ಪ ಹಾಗೂ ದೇವತಕ್ಕರಾದ ಚೆಪ್ಪುಡೀರ ಪೊನ್ನಪ್ಪ ಅವರು ಭಾಗವಹಿಸಲಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಹಿಂದೂ ಸಂಗಮ ತಾಲೂಕು ಆಯೋಜನ ಸಮಿತಿ ಕಾರ್ಯದರ್ಶಿ ಮನೆಯಪಂಡ ಶೀಲಾ ಬೋಪಣ್ಣ, ಕಾರ್ಯಕ್ರಮದ ನಿಮಿತ್ತ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಉತ್ಸಾಹಿ ಯುವಕರಿಗೆ ಅದರ ಹೊಣೆಗಾರಿಕೆಯನ್ನು ನೀಡಲಾಗಿದೆ. ಪೊನ್ನಂಪೇಟೆ ಪಟ್ಟಣ ವ್ಯಾಪ್ತಿಯ ಎಲ್ಲ ದೇವಸ್ಥಾನ ಸಮಿತಿ, ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಈಗಾಗಲೇ ಸಂಪರ್ಕಿಸಿ ಸಹಕಾರ ಕೋರಲಾಗಿದೆ. ಸುಮಾರು 5000 ಜನರು ಸೇರುವ ನಿರೀಕ್ಷೆಯಿದೆ .ಪೊನ್ನಂಪೇಟೆ ಪಟ್ಟಣವನ್ನು ಬಂಟಿಂಗ್ಸ್ ಮತ್ತು ಕೇಸರಿ ಬಾವುಟಗಳನ್ನು ಕಟ್ಟಿ, ಅಲಂಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಶೋಭಾಯಾತ್ರೆಯ ಸಂದರ್ಭ ವಿವಿಧ ಕಲಾತಂಡಗಳಿಂದ ನೃತ್ಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಮಹಿಳೆಯರು ಕಳಸ ಹೊತ್ತು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ನಂತರ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ಸಂದರ್ಭ ಸಮಿತಿಯ ಸದಸ್ಯರಾದ ಅನು, ವೆಂಕಟೇಶ್, ಸುಜು, ಜೀತು, ರಾಮಕೃಷ್ಣ ಹಾಗೂ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net