ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಬೇಕೆಂದರೆ ಸಾಕಷ್ಟು ನಿಯಮಗಳಿದ್ದವು. ಠೇವಣಿಯನ್ನು ಇರಿಸಬೇಕಾಗಿತ್ತು. ಸಾಮಾನ್ಯ ಜನತೆಯು ಬ್ಯಾಂಕ್‌ಗಳ ಖಾತೆಯನ್ನು ತೆರೆಯಲು ಇನ್ನಿಲ್ಲದ ಹರಸಾಹಸ ಮಾಡಬೇಕಿತ್ತು. ಅವುಗಳಿಂದ ದೂರವೇ ಉಳಿದುಕೊಂಡಿರುವುದನ್ನು ಮನಗಂಡ ಸರ್ಕಾರಗಳು ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಬೇಕು. ಇದಕ್ಕೆ ಬೇಕಾದ ಕಾನೂನು ನಿಯಮಗಳನ್ನು ಸರಳೀಕರಣಕರಣಗೊಳಿಸುವ ಮೂಲಕ ಜನತೆಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.