ಮತ್ತಿಗೋಡು ಶಿಬಿರದ ಝೂ ಅಭಿ ಆನೆ ಸಾವು

ಕೊಡಗು ಜಿಲ್ಲೆಯ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಪಳಗಿಸುತ್ತಿದ್ದ ಸಾಕಾನೆ ಝೂ ಅಭಿ
ಕೊಡಗು ಜಿಲ್ಲೆಯ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಪಳಗಿಸುತ್ತಿದ್ದ ಸಾಕಾನೆ ಝೂ ಅಭಿ
Published on
ಸಿದ್ದಾಪುರ: ಕೊಡಗು ಜಿಲ್ಲೆಯ ಮತ್ತಿಗೋಡು ಶಿಬಿರದಲ್ಲಿ ಸಾಕಾನೆ ಝೂ ಅಭಿ (21) ಭಾನುವಾರ ಸಂಜೆ ಮೃತಪಟ್ಟಿದೆ. ಆನೆಯ ನಿಧನ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಶಿಬಿರದ ಕಾರ್ಮಿಕರಲ್ಲಿ ದುಃಖ ಮೂಡಿಸಿದೆ.
ಕಳೆದ ಸುಮಾರು ಆರು ತಿಂಗಳಿನಿಂದ ಕಾಲು ನೋವಿನಿಂದ ಬಳಲುತ್ತಿದ್ದ ಝೂ ಅಭಿಗೆ ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಭಾನುವಾರ ಸಂಜೆ ಆನೆಯ ಆರೋಗ್ಯ ಏಕಾಏಕಿ ಹದಗೆಟ್ಟು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಆನೆಯ ಮರಣೋತ್ತರ ಪರೀಕ್ಷೆಯನ್ನು ಸೋಮವಾರ ಪಶುವೈದ್ಯಾಧಿಕಾರಿ ಡಾ.ರಮೇಶ್ ಅವರು ನಡೆಸಿದರು. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ಶಿಬಿರದ ಆವರಣದಲ್ಲೇ ಸೋಮವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಡಿಎಫ್‌ಒ, ಡಿಸಿಎಫ್ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಶೇಷ ಹಿನ್ನೆಲೆ ಇರುವ ಝೂ ಅಭಿ ಆನೆ ಮೊದಲು ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಇತ್ತು. ಆ ವೇಳೆ ಮಾವುತನ ಮೇಲೆ ದಾಳಿ ನಡೆಸಿ ಸಾವಿಗೆ ಕಾರಣವಾದ ಬಳಿಕ ಆನೆಯನ್ನು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ತರಲಾಗಿತ್ತು. ಬಳಿಕ ಶಿಬಿರದಲ್ಲಿ ತರಬೇತಿ ನೀಡಿಲಾಗುತ್ತಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net