ಕ್ರೀಡಾ ಸಾಧಣೆಗೆ ಶಿಸ್ತು, ಬದ್ಧತೆ ಮುಖ್ಯ

ನಾಪೋಕ್ಲು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಕೆಪಿಎಸ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಹಾಕಿ ತರಬೇತಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳೊಂದಿಗೆ ಪಾಂಡಂಡ ಬೋಪಣ್ಣ, ಮುಂಡಂಡ ಸಿ.ನಾಣಯ್ಯ, ಕೇಟೋಳಿರ ಹರೀಶ್ ಪೂವಯ್ಯ, ಕೂತಂಡ ಪೂಣಚ್ಚ, ಬೋಪ್ಪಂಡ ಬೊಳ್ಳಮ್ಮ ನಾಣಯ್ಯ ಇದ್ದರು.
ನಾಪೋಕ್ಲು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಕೆಪಿಎಸ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಹಾಕಿ ತರಬೇತಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳೊಂದಿಗೆ ಪಾಂಡಂಡ ಬೋಪಣ್ಣ, ಮುಂಡಂಡ ಸಿ.ನಾಣಯ್ಯ, ಕೇಟೋಳಿರ ಹರೀಶ್ ಪೂವಯ್ಯ, ಕೂತಂಡ ಪೂಣಚ್ಚ, ಬೋಪ್ಪಂಡ ಬೊಳ್ಳಮ್ಮ ನಾಣಯ್ಯ ಇದ್ದರು.
Published on
ನಾಪೋಕ್ಲು: ಯಶಸ್ವಿ ಶಿಬಿರವನ್ನು ಸಂಘಟಿಸಲು ಎಲ್ಲರ ಸಹಕಾರ, ಶಿಸ್ತು ಹಾಗೂ ಬದ್ಧತೆ ಮುಖ್ಯ ಎಂದು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಹೇಳಿದರು.
ಸ್ಥಳೀಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಕೆಪಿಎಸ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಹಾಕಿ ತರಬೇತಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಸತತ 26 ವರ್ಷಗಳ ಕಾಲ ಒಂದು ಶಿಬಿರವನ್ನು ನಡೆಸುವುದು ಸುಲಭದ ಮಾತಲ್ಲ. ಮೈಸೂರಿನ ಆರ್‌ವಿ ವಿದ್ಯಾಸಂಸ್ಥೆ ಹಾಕಿ ಆಟಗಾರರಿಗೆ ಉಚಿತ ಟ್ಯೂಷನ್ ನೀಡುತ್ತದೆ. ಇವುಗಳ ಸದುಪಯೋಗವನ್ನು ಪಡೆದುಕೊಂಡು ಶಿಬಿರಾರ್ಥಿಗಳು ಕ್ರೀಡೆಗೆ ಆದ್ಯತೆ ನೀಡಿ ಉನ್ನತ ಸಾಧನೆ ಮಾಡಬೇಕು ಎಂದರು.
ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಮಾತನಾಡಿ, ತಂದೆ-ತಾಯಿಗಳ ಒತ್ತಡ, ಆಯೋಜಕರ ಪ್ರೇರಣೆಯಿಂದ ಶಿಬಿರದಲ್ಲಿ ಭಾಗವಹಿಸುವುದು ಸರಿಯಲ್ಲ. ಶಿಬಿರದ ಪ್ರಯೋಜನಗಳ ಬಗ್ಗೆ ಅರಿತುಕೊಂಡು ಮುಂದಿನ ಭವಿಷ್ಯದ ಬಗ್ಗೆ ಯೋಚಿಸಬೇಕು. ಉತ್ತಮ ಗುರಿಯಿಂದ ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು. ಇದೇ ವೇಳೆ ಕ್ರೀಡಾ ಅಕಾಡೆಮಿಗೆ 50 ಸಾವಿರ ರೂ. ದೇಣಿಗೆ ನೀಡಿದರು.
ಕೇಟೋಳಿರ ಹರೀಶ್ ಪೂವಯ್ಯ ಮಾತನಾಡಿ, 26 ವರ್ಷ ಸತತವಾಗಿ ಶಿಬಿರ ನಡೆಸಿರುವುದು ಶ್ಲಾಘನೀಯ. ಶಿಬಿರಾರ್ಥಿಗಳು ಉತ್ತಮ ಗುರಿ ಇರಿಸಿ ಉನ್ನತ ಸ್ಥಾನಕ್ಕೇರಬೇಕು ಎಂದರು.
ಕ್ರೀಡಾ ಅಕಾಡೆಮಿ ಅಧ್ಯಕ್ಷ ಕಾಂಡಂಡ ಜೋಯಪ್ಪ ಮಾತನಾಡಿ, ಶಿಬಿರದಲ್ಲಿ ತರಬೇತಿ ಪಡೆಯುವುದರ ಮೂಲಕ ಉತ್ತಮ ಹಾಕಿ ಆಟಗಾರರಾಗಿ ರೂಪಗೊಂಡ ಹಲವು ಕ್ರೀಡಾಪಟುಗಳಿದ್ದಾರೆ. ತರಬೇತಿ ನಿರಂತರವಾಗಿರಲಿ. ಶಿಸ್ತಿನಿಂದ ಕ್ರೀಡೆಯನ್ನು ಅಭ್ಯಾಸ ಮಾಡಿದರೆ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯ ಎಂದರು.
ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕೂತಂಡ ಪೂಣಚ್ಚ ಮಾತನಾಡಿ, ನಾನು ಕೂಡ ಗೋಣಿಕೊಪ್ಪಲಿನಲ್ಲಿ ಮಕ್ಕಳಿಗೆ ಹಾಕಿ ತರಬೇತಿ ಶಿಬಿರ ನಡೆಸಿಕೊಂಡು ಬರುತ್ತಿದ್ದೇನೆ. ಮುಂದಿನ ಬಾರಿ ನಾಪೋಕ್ಲುವಿನ ಶಿಬಿರದ ವಿದ್ಯಾರ್ಥಿಗಳನ್ನು ಪೊನ್ನಂಪೇಟೆಯಲ್ಲಿರುವ ಟರ್ಫ್ ಮೈದಾನಕ್ಕೆ ಕರೆದುಕೊಂಡು ಬಂದು ಅಲ್ಲಿ ನಾಲ್ಕು ದಿನ ತರಬೇತಿ ನೀಡಲು ಸಹಕಾರ ನೀಡುವೆ ಎಂದು ಹೇಳಿದರು.
ನಿವೃತ್ತ ಶಿಕ್ಷಕಿ ಬೋಪ್ಪಂಡ ಬೊಳ್ಳಮ್ಮ ನಾಣಯ್ಯ, ಕ್ರೀಡಾ ವೀಕ್ಷಕ ವರದಿಗಾರ ಮಾಲೇಟೀರ ಶ್ರೀನಿವಾಸ್, ಹಾಕಿ ಅಕಾಡೆಮಿ ಉಪಾಧ್ಯಕ್ಷ ಕೊಂಡಿರ ಗಣೇಶ್, ಕೊಡವ ಹಾಕಿ ಅಕಾಡೆಮಿ ಕಾರ್ಯದರ್ಶಿ ನಾಯಕಂಡ ದೀಪಕ್ ಚಿಣ್ಣಪ್ಪ, ಶಿವಾಚಾಳೀಯಂಡ ಅಂಬಿ ಕಾರ್ಯಪ್ಪ, ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಶಿವಾಚಾಳೀಯಂಡ ಸೀಮಾ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಅಕಾಡೆಮಿ ಕಾರ್ಯದರ್ಶಿ ಮಾಚೇಟಿರ ಕುಶು ಕುಶಾಲಪ್ಪ, ಅಕಾಡೆಮಿ ಖಜಾಂಚಿ ಕೇಟೋಳಿರ ಅಚ್ಚಪ್ಪ, ಅರೇಯಡ ಗಣೇಶ, ಬಿದ್ದಾಟಂಡ ಮಮತಾ ಚಿನ್ನಪ್ಪ, ನಿರ್ದೇಶಕರಾದ ದುಗ್ಗಳ ಸದಾನಂದ, ಕುಂಚ್ಚೆಟೀರ ಸುದೀ ಉತ್ತಪ್ಪ, ಕುಡ್ಯೋಳಂಡ ಕವಿತಾ, ಪೋಷಕರಾದ ಪಾಡಿಯಂಮಂಡ ಗಾಯತ್ರಿ, ಅರೆಯಡ ರತ್ನ ಪೆಮ್ಮಯ್ಯ, ಚೇರುವಳಂಡ ಜೋಯಪ್ಪ , ಕಲ್ಲೇಂಗಡ ಕಾರ್ಯಪ್ಪ, ಕ್ಯಾಲೇಟೀರ ಡಾ.ಬೋಪಣ್ಣ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net