ಭಾಗಮಂಡಲ ರಸ್ತೆ ದುರಸ್ತಿಗೆ ಆಗ್ರಹ

ನಾಪೋಕ್ಲು ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ರಸ್ತೆ ಗುಂಡಿಗಳಲ್ಲಿ ಮಳೆ ನೀರು ನಿಂತಿರುವುದು.
ನಾಪೋಕ್ಲು ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ರಸ್ತೆ ಗುಂಡಿಗಳಲ್ಲಿ ಮಳೆ ನೀರು ನಿಂತಿರುವುದು.
Published on
ನಾಪೋಕ್ಲು: ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಆದರೂ ನಾಪೋಕ್ಲು ಭಾಗಮಂಡಲ ರಸ್ತೆಗೆ ದುರಸ್ತಿಯ ಭಾಗ್ಯ ಲಭಿಸಿಲ್ಲ. ರಸ್ತೆ ದುರಸ್ತಿಯ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. 
ನಾಪೋಕ್ಲುಯಿಂದ ನೆಲಜಿ ಗ್ರಾಮದವರೆಗೆ ಅಲ್ಲಲ್ಲಿ ರಸ್ತೆ ಗುಂಡಿಗಳನ್ನು ಇತ್ತೀಚೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಆದರೆ ರಸ್ತೆಯ ಮುಂದಿನ ಭಾಗಮಂಡಲದವರೆಗೆ ಅಲ್ಲಲ್ಲಿ ಹದಗೆಟ್ಟಿದೆ. ಅಯ್ಯಂಗೇರಿ ಗ್ರಾಮದಲ್ಲಿ ರಸ್ತೆ ಗುಂಡಿಗಳು ಹೆಚ್ಚಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ. ಮಳೆ ಬಂದರಂತೂ ಗುಂಡಿಗಳಲ್ಲಿ ನೀರು ನಿಂತು ವಾಹನ ಸಾಗಲು ದುಸ್ಸಾಹಸ ಪಡಬೇಕಾಗುತ್ತದೆ. 
ಇದರಿಂದಾಗಿ ವಾಹನ ಚಾಲಕರು, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ರಸ್ತೆಯನ್ನು ಸರಿಪಡಿಸುವ ದಿನಗಳು ಯಾವತ್ತು ಎಂದು ಜನ ಸಾಮಾನ್ಯರು ಕಾಯುವಂತಾಗಿದೆ. ಮಳೆಗಾಲಕ್ಕೂ ಮೊದಲು ರಸ್ತೆ ಭಾಗ್ಯ ಕರುಣಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net