ಬಿಜೆಪಿ ಕಾರ್ಯಕರ್ತರು, ರೈತರ ಪ್ರತಿಭಟನೆ

ವಿರಾಜಪೇಟೆ ಮಂಡಲ ಬಿಜೆಪಿ ಕಾರ್ಯಕರ್ತರು, ರೈತರು ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪಳೆಯಂಡ ರಾಬಿನ್ ದೇವಯ್ಯ, ವಾಟೇರಿರ ಬೋಪಣ್ಣ, ಪುಲಿಯಂಡ ಪೊನ್ನಣ್ಣ, ಮಾಚಿಮಂಡ ವಸಂತ, ಮಲ್ಲಂಡ ಮಧು, ಶಶಿ ಸುಬ್ರಮಣಿ, ಕೂತಂಡ ಸಚಿನ್, ವಾಟೇರಿರ ವಿರಜ್, ಕಾಂತಿ ಸತೀಶ್, ರೀನಾ ಪ್ರಕಾಶ್, ಬೊಪ್ಪಂಡ ಸುನಿತಾ ಇದ್ದರು.
ವಿರಾಜಪೇಟೆ ಮಂಡಲ ಬಿಜೆಪಿ ಕಾರ್ಯಕರ್ತರು, ರೈತರು ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪಳೆಯಂಡ ರಾಬಿನ್ ದೇವಯ್ಯ, ವಾಟೇರಿರ ಬೋಪಣ್ಣ, ಪುಲಿಯಂಡ ಪೊನ್ನಣ್ಣ, ಮಾಚಿಮಂಡ ವಸಂತ, ಮಲ್ಲಂಡ ಮಧು, ಶಶಿ ಸುಬ್ರಮಣಿ, ಕೂತಂಡ ಸಚಿನ್, ವಾಟೇರಿರ ವಿರಜ್, ಕಾಂತಿ ಸತೀಶ್, ರೀನಾ ಪ್ರಕಾಶ್, ಬೊಪ್ಪಂಡ ಸುನಿತಾ ಇದ್ದರು.
Published on
ವಿರಾಜಪೇಟೆ: ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕಿನಲ್ಲಿ ವನ್ಯಜೀವಿ ಮಾನವ ಸಂಘರ್ಷ ದಿನೇ ದಿನೆ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆ ಶಾಶ್ವತ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿ ಬುಧವಾರ ವಿರಾಜಪೇಟೆ ಮಂಡಲ ಬಿಜೆಪಿ ಕಾರ್ಯಕರ್ತರು, ರೈತರು ಪ್ರತಿಭಟನೆ ನಡೆಸಿದರು.
ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಕಾರ್ಯಕರ್ತರು ಪೊಲೀಸರು, ರೈತರನ್ನು ತಡೆದರು. ವಿರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ ನೇತೃತ್ವದಲ್ಲಿ ವಿರಾಜಪೇಟೆ ಗಾಂಧಿನಗರದಲ್ಲಿರುವ ಅರಣ್ಯ ಇಲಾಖೆ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಕಾಡು ಪ್ರಾಣಿಗಳಿಂದ ರೈತರನ್ನು ಉಳಿಸಿ ಎಂದು ಘೋಷಣೆ ಕೂಗುತ್ತಾ ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಡಿಎಫ್‌ಒ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.
ಗೇಟ್‌ನ ಬಳಿಗೆ ಬಂದ ಡಿಎಫ್‌ಒ ಅವರ ಬಳಿ ಪ್ರತಿಭಟನಾಕಾರರೂ ಎಷ್ಟೇ ಕೇಳಿಕೊಂಡರೂ ಅರಣ್ಯ ಇಲಾಖೆ ಒಳಗಡೆ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ನಾವು ಶಾಂತಿಯುತವಾಗಿ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಕೋರಿದರೂ ಸ್ಪಂದಿಸಲಿಲ್ಲ. ವನ್ಯ ಪ್ರಾಣಿಗಳ ನಿಯಂತ್ರಣ ಸಾಧ್ಯವಿಲ್ಲ ಅಂದರೆ ಕೆಲಸಕ್ಕೆ ರಾಜೀನಾಮೆ ನೀಡಿ ತೆರಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ ಸುಜಾ ಕುಶಾಲಪ್ಪ ಮಾತನಾಡಿ, ರೈಲ್ವೆ ಬ್ಯಾರಿಕೆಡ್‌ಗೆ 22 ಕೋಟಿ ರೂ.ಅನುದಾನ ಬಂದಿದೆ ಅಧಿಕಾರಿಗಳು ಅದರ ಸಂಪೂರ್ಣ ಮಾಹಿತಿಯನ್ನು ಕೊಡಬೇಕು. ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು. ವನ್ಯಪ್ರಾಣಿಗಳಿಂದ 32 ಜನ ಮೃತಪಟ್ಟಿದ್ದಾರೆ. ವಿಶೇಷವಾಗಿ ಕೊಡಗು ಜಿಲ್ಲೆ ಅರಣ್ಯ ಪ್ರದೇಶದಿಂದ ಕೂಡಿದ್ದು ಅರಣ್ಯ ಇಲಾಖೆ ಸಿಸಿಎಫ್ ಮೂಲಕ ಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿ ಅನುದಾನ ತರಬೇಕಾದದ್ದು ನಿಮ್ಮ ಕರ್ತವ್ಯ ಎಂದು ಹೇಳಿದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಚಿಮಂಡ ರವೀಂದ್ರ, ಕೇಳಪಂಡ ಸುಜು ನಾಣಯ್ಯ, ರೀನಾ ಪ್ರಕಾಶ್, ಸುವಿನ್ ಮತ್ತಿತರರು ಡಿಸಿಎಫ್ ಜಗನ್ನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿಸಿಎಫ್ ಜಗನ್ನಾಥ್, ತಮ್ಮ ಬೇಡಿಕೆಗಳನ್ನು ಮೇಲಧಿಕಾರಿಗಳ ಜತೆ ಚರ್ಚಿಸಿ ಅವರ ಮಾರ್ಗದರ್ಶನದಂತೆ ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ವಿರಾಜಪೇಟೆ ಮಂಡಲ ಅಧ್ಯಕ್ಷ ಸುವೀನ್ ಗಣಪತಿ, ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ, ಕಾರ್ಯದರ್ಶಿ ಮುದ್ದಿಯಂಡ ಮಂಜು, ವಿರಾಜಪೇಟೆ ನಗರ ಅಧ್ಯಕ್ಷ ಅನಿಲ್ ಮಂದಣ್ಣ, ಜಿಲ್ಲಾ ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ವಾಟೇರಿರ ಬೋಪಣ್ಣ, ಕಾನೂನು ಸಲಹೆಗಾರ ಪುಲಿಯಂಡ ಪೊನ್ನಣ್ಣ, ಮಾಚಿಮಂಡ ವಸಂತ, ಮಲ್ಲಂಡ ಮಧು, ಶಶಿ ಸುಬ್ರಮಣಿ, ಕೂತಂಡ ಸಚಿನ್, ವಾಟೇರಿರ ವಿರಜ್, ಕಾಂತಿ ಸತೀಶ್, ರೀನಾ ಪ್ರಕಾಶ್, ಬೊಪ್ಪಂಡ ಸುನಿತಾ, ಪಿ.ಜಿ.ಸುಮೇಶ್, ಚಕ್ಕೆರ ಸೂರ್ಯ, ಅಚ್ಚಪಂಡ ಮಹೇಶ್, ಅಭಿಜಿತ್ ಭಾಗವಹಿಸ್ದಿರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net