ಸೋಮವಾರಪೇಟೆ: ಹಿಂದೂ ಜಾಗರಣ ವೇದಿಕೆ ವತಿಯಿಂದ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಭಾನುವಾರ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.
ಜಿಲ್ಲಾ ಸಂಯೋಜಕ ಬೋಜೇಗೌಡ ಮಾತನಾಡಿ, 27 ವರ್ಷಗಳ ಹಿಂದೆ ನಡೆದ 60 ದಿನಗಳ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ತ್ಯಾಗ, ಶೌರ್ಯ ಮತ್ತು ಪರಾಕ್ರಮದಿಂದ ವಿಜಯ ಸಾಧಿಸಿದ್ದರು. ಈ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಳೆದ 27 ವರ್ಷಗಳಿಂದ ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಉಮೇಶ್, ಸುಭಾಷ್ ತಿಮ್ಮಯ್ಯ, ರತನ್ ಮಳ್ತೆ, ನಿಲಯ್ ಗೌಡ, ಸುನಿಲ್ ಹಾಗೂ ವಿನು ಮಾದಾಪುರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.