ಮಳೆಗೆ ತುಂಬಿ ಹರಿದ ಕರೆಗಳು

ಮಳೆಗೆ ಶನಿವಾರಸಂತೆ ವ್ಯಾಪ್ತಿಯ ಮುಳ್ಳೂರು ಬಳಿಯ ಇಂಟಿನಾಯಕನ ಕೆರೆ ಭರ್ತಿಯಾಗಿರುವುದು.  ಎಸ್‌ಎಸ್2 ಬತ್ತಿ ಹೋಗಿದ್ದ  ಕೊಡ್ಲಿಪೇಟೆ ವ್ಯಾಪ್ತಿಯ ಕ್ಯಾತಿ ಹೊಳೆ ತುಂಬಿ ಹರಿಯುತ್ತಿರುವುದು.
ಮಳೆಗೆ ಶನಿವಾರಸಂತೆ ವ್ಯಾಪ್ತಿಯ ಮುಳ್ಳೂರು ಬಳಿಯ ಇಂಟಿನಾಯಕನ ಕೆರೆ ಭರ್ತಿಯಾಗಿರುವುದು. ಎಸ್‌ಎಸ್2 ಬತ್ತಿ ಹೋಗಿದ್ದ ಕೊಡ್ಲಿಪೇಟೆ ವ್ಯಾಪ್ತಿಯ ಕ್ಯಾತಿ ಹೊಳೆ ತುಂಬಿ ಹರಿಯುತ್ತಿರುವುದು.
Published on

ಶನಿವಾರಸಂತೆ:

ಕಳೆದ ನಾಲ್ಕೈದು ದಿನಗಳಿಂದ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಈ ವರ್ಷ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಶೇ.60 ರಷ್ಟು ಮಳೆ ಕೊರತೆಯಾಗಿತ್ತು. ಇದೀಗ ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ಕೆರೆ-ಕಟ್ಟೆಗಳು ನಿಧಾನವಾಗಿ ತುಂಬಿಕೊಳ್ಳುತ್ತಿದೆ.

ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಗೌಡಳ್ಳಿ, ನಿಡ್ತ, ಮಾಲಂಬಿ ಮುಂತಾದ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಭಾಗದಲ್ಲಿ ಕೆರೆ ಹಳ್ಳ ತುಂಬಿಕೊಳ್ಳುತ್ತಿದೆ. ನಿಡ್ತ ಗ್ರಾ.ಪಂ.ವ್ಯಾಪ್ತಿಯ ಮುಳ್ಳೂರು ಬಳಿಯ ಇಂಟಿನಾಯಕನ ಕೆರೆ ಭರ್ತಿಯಾಗಿದೆ. ಹೀಗಾಗಿ ಕಾಲುವೆ ಮೂಲಕ ನೀರನ್ನು ಗ್ರಾಮದ ಮತ್ತೊಂದು ಕೆರೆಗೆ ಬಿಡಲಾಗಿದೆ.
ಕೊಡ್ಲಿಪೇಟೆ ಜಿಲ್ಲಾ ಗಡಿ ಭಾಗದ ಹಾಸನ ಜಿಲ್ಲೆಗೆ ಸೇರಿದ ಸಕಲೇಶಪುರ ತಾಲೂಕಿನ ಅಂಚಿನಲ್ಲಿರುವುದರಿಂದ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಬೀಳುತ್ತಿದೆ. ಪರಿಣಾಮ ಬೆಂಬಳೂರು, ಕ್ಯಾತೆ, ಊರುಗುತ್ತಿ ಮುಂತಾದ ಕಡೆಯಲ್ಲಿ ಹರಿದು ಶಾಂತಪುರ ಬಳಿ ಹೇಮಾವತಿ ನದಿಗೆ ಸೇರಿಕೊಳ್ಳುವ ಕಾಜೂರು ಹೊಳೆ ಕೂಡ ತುಂಬಿ ಹರಿಯುತ್ತಿರುವುದರಿಂದ ರೈತರಲ್ಲಿ ಸಂತಸ ಮನೆ ಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net