ಬ್ರಹ್ಮಗಿರಿ ಮಹಿಳಾ ತಂಡ ಚಾಂಪಿಯನ್

ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಬ್ರಹ್ಮಗಿರಿ ಮಹಿಳಾ ತಂಡಕ್ಕೆ ಟ್ರೋಫಿ ವಿತರಿಸಲಾಯಿತು. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ಕಾಳಿಮಾಡ ಮೋಟಯ್ಯ, ಇಟ್ಟೀರ ಬಿದ್ದಪ್ಪ, ಕಸ್ತೂರಿ,ಕವಿತಾ, ಆಶಾ, ಲೀಲಾವತಿ, ಕಾವ್ಯ,ಕಿಶನ್ ಇತರರಿದ್ದರು.
ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಬ್ರಹ್ಮಗಿರಿ ಮಹಿಳಾ ತಂಡಕ್ಕೆ ಟ್ರೋಫಿ ವಿತರಿಸಲಾಯಿತು. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ಕಾಳಿಮಾಡ ಮೋಟಯ್ಯ, ಇಟ್ಟೀರ ಬಿದ್ದಪ್ಪ, ಕಸ್ತೂರಿ,ಕವಿತಾ, ಆಶಾ, ಲೀಲಾವತಿ, ಕಾವ್ಯ,ಕಿಶನ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಪ್ಪಚ್ಚಕವಿ ಕೊಡವ ಕೂಟ ರನ್ನರ್ ಅಪ್
  • ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ಆಯೋಜನೆ
ಪೊನ್ನಂಪೇಟೆ: ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ಇತ್ತೀಚೆಗೆ ಆಯೋಜಿಸಿದ್ದ ಥ್ರೋಬಾಲ್ ಕಳಿನಮ್ಮೆ ಯಶಸ್ವಿಯಾಗಿ ನಡೆಯಿತು. ರೋಚಕ ಹಣಾಹಣಿಯಲ್ಲಿ ಬ್ರಹ್ಮಗಿರಿ ಮಹಿಳಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಪೊನ್ನಂಪೇಟೆಯ ಅಪ್ಪಚ್ಚಕವಿ ಕೊಡವ ಕೂಟ ರನ್ನರ್ ಆಫ್ ಪ್ರಶಸ್ತಿಗೆ ಭಾಜನವಾಯಿತು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಕಾಳಿಮಾಡ ಮೋಟಯ್ಯ ಸೇರಿದಂತೆ ಹಲವು ಗಣ್ಯರು ಪಂದ್ಯಾವಳಿಗೆ ಚಾಲನೆ ನೀಡಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟದಿಂದ ಇದೇ ಮೊದಲ ಬಾರಿಗೆ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕಿನಲ್ಲಿರುವ ಕೊಡವ ಪೊಮ್ಮಕ್ಕಡ ಕೂಟಗಳಿಗೆ ಥ್ರೋಬಾಲ್ ಪಂದ್ಯವನ್ನು ಆಯೋಜನೆ ಮಾಡಿತ್ತು. ತಾಲೂಕಿನ ವಿವಿಧ ಭಾಗದಿಂದ 13 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ ಗಮನ ಸೆಳೆದವು. ವಿಜೇತರಿಗೆ ನಗದು ಬಹುಮಾನ ಸೇರಿದಂತೆ ಪಾರಿತೋಷಕ ನೀಡಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ , ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಲಭಿಸುತ್ತಿದೆ. ಮಹಿಳೆಯರಿಗಾಗಿಯೇ ಕ್ರೀಡೆ ಆಯೋಜಿಸುತ್ತಿರುವುದು ಶ್ಲಾಘನೀಯ. ಸದಾ ಕೆಲಸದ ಒತ್ತಡದಲ್ಲಿರುವ ಮಹಿಳೆಯರು ಇಂತಹ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುವ ಅವಕಾಶವೂ ಲಭ್ಯವಾಗುತ್ತಿದೆ. ನಾಡಿನ ದಾನಿಗಳು ಕ್ರೀಡೆಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡುವಂತಾಗಬೇಕು ಎಂದರು.
ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆಯಾದ ಪ್ರೊ.ಇಟ್ಟಿರ ಕಮಲಾಕ್ಷಿ ಬಿದ್ದಪ್ಪ,
ಕಾಳಮಂಡ ಜಗತ್, ಕಾಳಮಂಡ ನಯನಾ, ಸಣ್ಣುವಂಡ ಪಾರ್ವತಿ ಮಂದಣ್ಣ, ಅರಮಣಮಾಡ ಚಿಟ್ಟಿಯಪ್ಪ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಚಿರಿಯಪಂಡ ಇಮ್ಮಿಬೋಜಮ್ಮ, ಇಟ್ಟಿರ ಮಧು, ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ಚೆಪ್ಪುಡೀರ ಕಾರ್ಯಪ್ಪ, ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಕೋಟೆರ ಕಿಶಾನ್, ಮೂಕಳೇರ ಕಾವ್ಯಾ, ಮಧು, ಗುಮ್ಮಟ್ಟಿರ ಗಂಗಮ್ಮ, ಮಿದೇರಿರ ಕವಿತಾರಾಮು, ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಮೂಕಳೇರ ಆಶಾ ಪೂಣಚ್ಚ, ಮೂಕಳೇರ ಲೀಲಾವತಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಕಳಿನಮ್ಮೆರ ತೀರ್ಪುಗಾರರಾಗಿ ಮಲ್ಲಮಾಡ ಸಂತೋಷ್, ರಾಜರೈ, ಚಿರಿಯಪಂಡ ಸುಬ್ಬಯ್ಯ, ಸೋಯಾಲ್ ಜಯನ್, ಕೇಚಟ್ಟಿರ ತಮ್ಮಯ್ಯ ಕಾರ್ಯ ನಿರ್ವಹಿಸಿದರು. ವಿವಿಧ ಭಾಗದಿಂದ ಹೆಚ್ಚಿನ ಮಹಿಳೆಯರು, ಸಾರ್ವಜನಿಕರು, ವಿವಿಧ ಕೊಡವ ಸಮಾಜಗಳ ಪದಾಧಿಕಾರಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net