ಬಿ.ಪಿ.ಕೃತಿಕಾಗೆ 5 ಚಿನ್ನದ ಪದಕ

ಬಿ.ಪಿ.ಕೃತಿಕಾ ಸ್ನಾತಕೋತ್ತರ ಪದವಿಯನ್ನು ಮೊದಲ ರ‌್ಯಾಂಕ್‌ನೊಂದಿಗೆ ಪಡೆದಿದ್ದು 5 ಚಿನ್ನದ ಪದಕಗಳು ಮತ್ತು 1 ನಗದು ಬಹುಮಾನವನ್ನು ಸ್ವೀಕರಿಸಿದರು.
ಬಿ.ಪಿ.ಕೃತಿಕಾ ಸ್ನಾತಕೋತ್ತರ ಪದವಿಯನ್ನು ಮೊದಲ ರ‌್ಯಾಂಕ್‌ನೊಂದಿಗೆ ಪಡೆದಿದ್ದು 5 ಚಿನ್ನದ ಪದಕಗಳು ಮತ್ತು 1 ನಗದು ಬಹುಮಾನವನ್ನು ಸ್ವೀಕರಿಸಿದರು.
Published on
ಸುಂಟಿಕೊಪ್ಪ: ಮೈಸೂರು ವಿಶ್ವವಿದ್ಯಾಲಯದ 106ನೇ ಘಟಿಕೋತ್ಸವದಲ್ಲಿ ಕೊಡಗಿನ ವಿದ್ಯಾರ್ಥಿನಿ ಬಿ.ಪಿ.ಕೃತಿಕಾ ಸ್ನಾತಕೋತ್ತರ ಪದವಿಯನ್ನು ಮೊದಲ ರ‌್ಯಾಂಕ್‌ನೊಂದಿಗೆ ಪಡೆದಿದ್ದು, 5 ಚಿನ್ನದ ಪದಕಗಳು ಮತ್ತು 1 ನಗದು ಬಹುಮಾನಕ್ಕೆ ಭಾಜನರಾಗಿ ಕೊಡಗಿಗೆ ಕೀರ್ತಿ ತಂದಿದ್ದಾರೆ.
ಮೂಲತಃ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಗ್ರಾಮದ ನಿವಾಸಿ ನಿವೃತ್ತ ಎ.ಎಸ್.ಐ ಪಾರ್ಥ ಮತ್ತು ನಿವೃತ್ತ ಮುಖ್ಯಶಿಕ್ಷಕಿ ಗೀತಾ ಪಾರ್ಥ ಅವರ ಪುತ್ರಿ ಪ್ರಸ್ತುತ ಪೊನ್ನಂಪೇಟೆ ನಿವಾಸಿ ಲವೀನ್ ಬಿದ್ದಪ್ಪ ಅವರ ಪತ್ನಿಯಾಗಿರುವ ಕೃತಿಕಾ ತಮ್ಮ ಎಂ.ಎಡ್ ಪದವಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಂದ ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು. ಪ್ರಸ್ತುತ ಮೈಸೂರಿನ ಸಂತ ಜೋಸೆಫರ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net