ಸುಂಟಿಕೊಪ್ಪ ಪಟ್ಟಣದ ಕನ್ನಡ ವೃತ್ತದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರಾಧ್ಯಕ್ಷ ಎಂ.ಟಿ.ಧನುಕಾವೇರಪ್ಪ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಿ.ಕೆ.ಪ್ರಶಾಂತ್, ಯುವ ಮೋರ್ಚಾ ಆಧ್ಯಕ್ಷ ವಿಘ್ನೇಶ್, ಕಾರ್ಯದರ್ಶಿ ನಿಖಿಲ್, ಮುಖಂಡರಾದ ವಾಸುದೇವ, ಪುನೀತ್, ಓಡಿಯಪ್ಪನ ಸುದೀಶ್, ಬೂತ್ ಆಧ್ಯಕ್ಷ ಪಾಂಡ್ಯನ್, ಆಕಾಶ್, ಲೀಲಾ ಮೇದಪ್ಪ, ತ್ರಿಶಾಲ್ ಇತರರು ಇದ್ದರು.
ಸುಂಟಿಕೊಪ್ಪ: ಪ್ರಧಾನಿ ಮೋದಿ ಭಯೋತ್ಪಾದಕ ಎಂದು ಹೇಳಿರುವ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪಟ್ಟಣದ ಕನ್ನಡ ವೃತ್ತದಲ್ಲಿ ಗುರುವಾರ ಬಿಜೆಪಿ ಪ್ರತಿಭಟನೆ ನಡೆಸಿತು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಮಾತನಾಡಿ, ಇಡೀ ವಿಶ್ವವೇ ಮೆಚ್ಚಿರುವಂತಹ ಪ್ರಧಾನಿಯನ್ನೂ ದೇಶದ ಹಿರಿಯ ಕಾಂಗ್ರೆಸ್ ನಾಯಕ ಭಯೋತ್ಪಾದಕ ಎಂದು ಹೇಳಿರುವುದು ಸರಿಯಲ್ಲ. ರಾಹುಲ್ ಗಾಂಧಿ ಆಗಾಗ ಪಾಕಿಸ್ತಾನಕ್ಕೆ ಹೋಗುತ್ತಾರೆ. ಅವರನ್ನು ಬಿಟ್ಟು ಪ್ರಧಾನಿ ಮೋದಿಯನ್ನು ಭಯೋತ್ಪಾದಕ ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರುದ್ಧವಾಗಿ ಮತ ಚಲಾಯಿಸಿ ನಾರಿಯರಿಗೆ ಅನ್ಯಾಯ ಮಾಡಿದೆ. ಮುಂದೊಂದು ದಿನ ಮಹಿಳಾ ಮೀಸಲಾತಿಗೆ ಪ್ರಬಲವಾದ ಫಲಿತಾಂಶ ಹೊರಬರಲಿದೆ ಎಂದರು.
ಪ್ರತಿಭಟನೆಯಲ್ಲಿ ನಗರಾಧ್ಯಕ್ಷ ಎಂ.ಟಿ.ಧನುಕಾವೇರಪ್ಪ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಿ.ಕೆ.ಪ್ರಶಾಂತ್, ಯುವ ಮೋರ್ಚಾ ಆಧ್ಯಕ್ಷ ವಿಘ್ನೇಶ್, ಕಾರ್ಯದರ್ಶಿ ನಿಖಿಲ್, ಮುಖಂಡರಾದ ವಾಸುದೇವ, ಪುನೀತ್, ಓಡಿಯಪ್ಪನ ಸುದೀಶ್, ಬೂತ್ ಆಧ್ಯಕ್ಷ ಪಾಂಡ್ಯನ್, ಆಕಾಶ್, ಲೀಲಾ ಮೇದಪ್ಪ, ತ್ರಿಶಾಲ್ ಇತರರು ಇದ್ದರು.