ಸಮಾನತೆಗೆ ಹೋರಾಡಿದ ಬಸವಾದಿ ಶರಣರು

ಅಖಿಲ ಭಾರತ ವೀರಶೈವ ಮಹಾಸಭಾ, ತೊರೆನೂರು ವಿರಕ್ತ ಮಠದ ಸಹಯೋಗದಲ್ಲಿ ಮಠದ ಆವರಣದಲ್ಲಿ ಹುಣ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಂ.ಎನ್.ಕುಮಾರಸ್ವಾಮಿ, ಸೀಬಳ್ಳಿ ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ಎಚ್.ವಿ.ಶಿವಪ್ಪ, ಶಾಂಬಶಿವಯ್ಯ, ಕೆ.ಎಸ್.ಮೂರ್ತಿ ಇತರರಿದ್ದರು.
ಅಖಿಲ ಭಾರತ ವೀರಶೈವ ಮಹಾಸಭಾ, ತೊರೆನೂರು ವಿರಕ್ತ ಮಠದ ಸಹಯೋಗದಲ್ಲಿ ಮಠದ ಆವರಣದಲ್ಲಿ ಹುಣ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಂ.ಎನ್.ಕುಮಾರಸ್ವಾಮಿ, ಸೀಬಳ್ಳಿ ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ಎಚ್.ವಿ.ಶಿವಪ್ಪ, ಶಾಂಬಶಿವಯ್ಯ, ಕೆ.ಎಸ್.ಮೂರ್ತಿ ಇತರರಿದ್ದರು.
Published on
ಕುಶಾಲನಗರ: ಹನ್ನರಡನೇ ಶತಮಾನದಲ್ಲಿ ದೇವ ಭಾಷೆಯಾಗಿದ್ದ ಸಂಸ್ಕೃತ ಭಾಷೆಯನ್ನು ಜನಸಾಮಾನ್ಯರಿಗೆ ಅರ್ಥವಾಗುವ ಸರಳ ರೀತಿಯಲ್ಲಿ ವಚನಗಳನ್ನು ಬರೆದು ಸಮಾಜದಲ್ಲಿ ಸಮಾನತೆ ತರಲು ಹೋರಾಡಿದ ಬಸವಾದಿ ಶರಣರ ಚಿಂತನೆಗಳನ್ನು ಎಲ್ಲರೂ ಅರಿಯಬೇಕು. ಈ ಮೂಲಕ ಸಮಾನತೆಯ ದೇಶ ಕಟ್ಟಲು ಎಲ್ಲರೂ ಕೈಜೋಡಿಸಬೇಕು ಎಂದು ಸಾಮಾಜಿಕ ಚಿಂತಕ ಸೀಬಳ್ಳಿ ಸೋಮಶೇಖರ್ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕ ಹಾಗೂ ತೊರೆನೂರು ವಿರಕ್ತಮಠದ ಸಹಯೋಗದಲ್ಲಿ ಮಠದ ಆವರಣದಲ್ಲಿ ಹುಣ್ಣಿಮೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಸಿಕ ಚಿಂತನಾ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣ ಸಮಾನತೆಗಾಗಿ ಹಾಗೂ ಜನರ ಹಕ್ಕುಗಳಿಗಾಗಿ ಹೋರಾಡಿದರು. ಇಂದು ಜನರ ಹಕ್ಕುಗಳನ್ನು ನಿರ್ಲಕ್ಷಿಸಿ ಸ್ವಹಿತಾಸಕ್ತಿಗಳಿಗಾಗಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಅಸಮಾನತೆ ತಾಂಡವವಾಡುತ್ತಿದೆ ಎಂದರು.
ಈ ದೇಶದ ಉದ್ಯಮಿ ಅಂಬಾನಿ ಅವರು, ಪ್ರಧಾನಿ ನರೇಂದ್ರ ಮೋದಿಗಿಂತಲೂ ಶ್ರೀಮಂತ. ಆದರೆ, ಹಳ್ಳಿಯ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರ ಬಾಯಲ್ಲೂ ಮೋದಿಯ ಹೆಸರು ಬರುತ್ತದೆಯೇ ಹೊರತು ಅಂಬಾನಿಯ ಹೆಸರಲ್ಲ. ಅಂದರೆ ಸ್ವಾರ್ಥ ಹಾಗೂ ಸ್ವಹಿತ ಬಿಟ್ಟು ಸಮಾಜದ ಹಿತಕ್ಕೆ ತೊಡಗಿಸಿಕೊಳ್ಳುವ ಮಹನೀಯರು ಎಂದಿಗೂ ಎಲ್ಲರ ಮನದಲ್ಲಿ ಉಳಿಯುತ್ತಾರೆ. ಹಾಗೆಯೇ ಬಸವಾದಿ ಶರಣರು, ಶ್ರೇಷ್ಠ ಚಿಂತಕರು, ಸಾಹಿತಿಗಳು ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ ಎಂದು ಹೇಳಿದರು.
ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಹಾಸನ ಜಿಲ್ಲಾ ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ ಮಾತನಾಡಿ, ಕುಡಿಯಲು ಯೋಗ್ಯವಲ್ಲದ ಕಾವೇರಿ ನದಿಯ ನೀರನ್ನು ನಾವು ಕಾಣುವಂತಾಗಿದೆ. ನದಿಯನ್ನು ಗೌರವಿಸಿ ನದಿಯಲ್ಲಿನ ನೀರನ್ನು ಸ್ವಚ್ಛಂದವಾಗಿ ಕಾಪಾಡಿದರೆ ತಾಯಿಯನ್ನು ಗೌರವಿಸಿದಂತಾಗುತ್ತದೆ. ಆದ್ದರಿಂದ ಎಲ್ಲರೂ ನದಿ ಸಂರಕ್ಷಣೆಗೆ ಮುಂದಾಗಬೇಕಿದೆ. ಹಾಗೆಯೇ ಇಂದಿನ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕೊಡುವ ಮೂಲಕ ನಾಳೆಯ ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಪಾಲಕರ ಮೇಲಿದೆ ಎಂದರು.
ಎಂ.ಎನ್.ಕುಮಾರಸ್ವಾಮಿ, ಸೀಬಳ್ಳಿ ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ಬಿ.ನಟರಾಜು, ಶರಣ ಸಾಹಿತ್ಯ ಯುವ ಘಟಕದ ಜಿಲ್ಲಾಧ್ಯಕ್ಷ ಮೋಹನ್, ಬಸವೇಶ್ವರ ಸೌಹಾರ್ದ ಬ್ಯಾಂಕ್‌ನ ಉಪಾಧ್ಯಕ್ಷ ಎಚ್.ಪಿ.ಉದಯಕುಮಾರ್, ತೊರೆನೂರು ಬಸವೇಶ್ವರ ದೇವಾಲಯದ ಅಧ್ಯಕ್ಷ ಟಿ.ಬಿ.ಜಗದೀಶ್, ಕೃಷಿಕರಾದ ಗುರುಲಿಂಗಪ್ಪ, ಹುಲುಸೆ ನಾಗಣ್ಣ, ಅಕ್ಕನ ಬಳಗದ ಗೌರವಾಧ್ಯಕ್ಷೆ ವಿಜಯಾ ಪಾಲಾಕ್ಷ, ಕಪನಪ್ಪ, ಚಿದಾನಂದ, ಪ್ರಕಾಶ್, ಸೋಮಶೇಖರಾಚಾರಿ, ಪ್ರೇಮಕುಮಾರ್ ದೇವಾಂಗ ಇದ್ದರು. ವಿನಂತ್ ವಚನ ಗಾಯನ ನಡೆಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net