8ರಂದು ಬೆಂಗಳೂರು ಚಲೋ

ಗ್ರಾಮ ಪಂಚಾಯಿತಿ ನೌಕರರಿಗೆ ಜಾರಿಯಾಗಿರುವ ಕನಿಷ್ಠ ವೇತನವನ್ನು ತಡೆಹಿಡಿದು ಮರು ಪರಿಶೀಲನೆಗಾಗಿ ಉಪಸಮಿತಿ ರಚಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಗ್ರಾಮ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ವಿಶ್ವ ರಂಗಸ್ವಾಮಿ, ಗಾಯಿತ್ರಿ, ಮಣಿಕಂಠ, ಮುನಿಸ್ವಾಮಿ, ರಾಮಚಂದ್ರ, ವಿಶ್ವ, ರವಿ, ರಾಜ, ಮುರುಗೇಶ್, ರಮೇಶ, ಸಣ್ಣ, ಚಂದ್ರಮಣಿ, ಕೊಡಗರಹಳ್ಳಿಯ ನೀರು ಗಂಟಿ ಮಂಜ, ಪ್ರಕಾಶ್ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಪಂ ನೌಕರರಿಗೆ ಕನಿಷ್ಠ ವೇತನ ಜಾರಿಗೆ ಪಟ್ಟು
ಸುಂಟಿಕೊಪ್ಪ: ಗ್ರಾಮ ಪಂಚಾಯಿತಿ ನೌಕರರಿಗೆ ಜಾರಿಯಾಗಿರುವ ಕನಿಷ್ಠ ವೇತನವನ್ನು ತಡೆಹಿಡಿದು ಮರು ಪರಿಶೀಲನೆಗಾಗಿ ಉಪಸಮಿತಿ ರಚಿಸಿರುವುದನ್ನು ಖಂಡಿಸಿ ಸೆ.8ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಹೇಳಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಶುಕ್ರವಾರ ವಿವಿಧ ಪಂಚಾಯಿತಿ ನೌಕರರು ಸಾಂಕೇತಿಕ ಪ್ರತಿಭಟನೆ ನಡೆಸಿದ ಬಳಿಕ ಅವರು ಮಾತನಾಡಿದರು.
ನಮ್ಮ ಬೇಡಿಕೆಯನ್ನು ಮನ್ನಿಸಿ ರಾಜ್ಯ ಸರ್ಕಾರ ಮೇ ತಿಂಗಳಿನಲ್ಲಿ 21,600 ರೂ.ಕನಿಷ್ಠ ವೇತನ ನಿಗದಿಗೊಳಿಸಿ ಆದೇಶಿಸಲಾಗಿದೆ. ಆದರೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಈ ವೇತನವನ್ನು ತಡೆ ಹಿಡಿದು ಮರು ಪರಿಶೀಲನೆಗೆಂದು ಡಿಸಿಎಂ ಡಾ.ಜಿ.ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಿದೆ. ಈ ಕೂಡಲೇ ಇದನ್ನು ವಿಸರ್ಜಿಸಬೇಕು. ವೇತನ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗಾಗಿ ಸೆ.8ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.
ವಿಶ್ವ ರಂಗಸ್ವಾಮಿ, ಗಾಯಿತ್ರಿ, ಮಣಿಕಂಠ, ಮುನಿಸ್ವಾಮಿ, ರಾಮಚಂದ್ರ, ವಿಶ್ವ, ರವಿ, ರಾಜ, ಮುರುಗೇಶ್, ರಮೇಶ, ಸಣ್ಣ, ಚಂದ್ರಮಣಿ, ಕೊಡಗರಹಳ್ಳಿಯ ನೀರು ಗಂಟಿ ಮಂಜ, ಪ್ರಕಾಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net