ಸಂವಿಧಾನ ಕೊಟ್ಟ ಅಂಬೇಡ್ಕರ್ ವಿಶ್ವಕ್ಕೆ ಮಾದರಿ

ಮುಳ್ಳೂರು ಹೊನ್ನೇಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿದರು. ಜಯಕುಮಾರ್, ವಸಂತ್, ರಾಜು, ರಾಜಶೇಖರ್, ಶಂಕರ್ ಇತರರು ಇದ್ದರು.
ಮುಳ್ಳೂರು ಹೊನ್ನೇಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿದರು. ಜಯಕುಮಾರ್, ವಸಂತ್, ರಾಜು, ರಾಜಶೇಖರ್, ಶಂಕರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಿಲನಾ ಕೆ.ಭರತ್ ಅಭಿಪ್ರಾಯ
  • ಬಾಬಾ ಸಾಹೇಬ್ ಜಯಂತಿ ಕಾರ್ಯಕ್ರಮ
ಶನಿವಾರಸಂತೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಯಾವುದೇ ಜಾತಿ-ಜನಾಂಗ, ಭಾಷೆಗೆ ಸೀಮಿತವಾಗದ ಮಹಾನ್ ನಾಯಕ ಎಂದು ಕೊಡಗು ಜಿಲ್ಲಾ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಕೆ.ಭರತ್ ತಿಳಿಸಿದರು.
ಮುಳ್ಳೂರು ಹೊನ್ನೇಕೊಪ್ಪಲು ಗ್ರಾಮದಲ್ಲಿ ಶ್ರೀ ವಿಶ್ವರತ್ನ ಡಾ.ಅಂಬೇಡ್ಕರ್ ಸಮಿತಿ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾನ್ ಮಾನವತಾವಾದಿಯಾಗಿರುವ ಅಂಬೇಡ್ಕರ್ ಅವರು ದೇಶಕ್ಕೆ ಸಮಾನತೆ ಸಾರುವ ಸಂವಿಧಾನ ಕೊಟ್ಟು ವಿಶ್ವಕ್ಕೆ ಮಾದರಿಯಾಗಿದ್ದಾರೆ. ಸಂವಿಧಾನದಲ್ಲಿ ಮೀಸಲಾತಿ ಜತೆಗೆ ಸಾಮಾಜಿಕವಾಗಿ ಆರ್ಥಿಕವಾಗಿ ಎಲ್ಲ ಜನಾಂಗದವರು ಮುಂದುವರೆಯುವ ಸಲುವಾಗಿ ಹಲವು ಯೋಜನೆಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ತಮ್ಮ ಬಾಲ್ಯದ ದಿನಗಳಲ್ಲಿ ಸಮಾಜ ಪರಿವರ್ತನೆ, ಅಸಮಾನತೆಗಳನ್ನು ಖಂಡಿಸಿ ಹೋರಾಟ ಮಾಡುವ ಸ್ವಭಾವ ಬೆಳೆಸಿಕೊಂಡರು. ಮುಂದೆ ತಮ್ಮ ಸಿದ್ಧಾಂತದ ಮೂಲಕವೇ ಗುರಿ ತಲುಪಿ ಸಾಧಿಸಿದರು ಎಂದರು.
ವಿಚಾರವಾದಿ ಕೆ.ಪಿ.ಜಯಕುಮಾರ್ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ನೀಡಿದ ಕೀರ್ತಿ ಅಂಬೇಡ್ಕರ್‌ಗೆ ಸಲ್ಲುತ್ತದೆ. ಪ್ರಜಾಪ್ರಭುತ್ವ ಎಂದರೆ ಪ್ರಜೆಗಳಿಂದ ಪ್ರತಿನಿಧಿಗಳು ಎಂದರ್ಥ. ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳನ್ನು ಮತದಾನದ ಮೂಲಕ ನಾವೇ ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆಯನ್ನು ಸಂವಿಧಾನದ ಮೂಲಕ ಜಾರಿಗೆ ತಂದರು. ಇದರಿಂದ ವಿಶ್ವದ ಬಲಿಷ್ಠ ಪ್ರಜಾಪ್ರಭುತ್ವ ದೇಶವಾಗಲು ಕಾರಣವಾಯಿತು ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಎಂ.ಪಿ ವಸಂತ್, ನಿವೃತ್ತ ಗ್ರಾಮ ಸಹಾಯಕ ಮಲ್ಲೇಶ್, ರಾಜು ಗೊರೂರು, ರಾಜಶೇಖರ್, ಎಂ.ಎನ್.ರಾಜಪ್ಪ, ತೇಜಾವತಿ, ಕೆ.ಬಿ.ಮಹೇಶ್, ಎಂ.ಎನ್.ಶಂಕರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net